

ಉಡುಪಿ: ಶಿವಳ್ಳಿ ಗ್ರಾಮದ ನೆಹರು ನಗರದಲ್ಲಿರುವ ಮನೆಗೆ ನುಗ್ಗಿದ ಕಳ್ಳರು ಬೆಡ್ ರೂಂ ನಲ್ಲಿದ್ದ ಕಪಾಟಿನ ಒಳಗೆ ಇರಿಸಿದ 2.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿದ್ದಾರೆ.
20 ಗ್ರಾಂನ ಕಿವಿಯ ಓಲೆ ಮತ್ತು ಸರ, 20 ಗ್ರಾಂನ ಪೆಂಡೆಂಟ್ ಸಹಿತ ಚಿನ್ನದ ಸರ, 4 ಗ್ರಾಂಮ ಚಿನ್ನದ ಉಂಗುರ, 8 ಗ್ರಾಂನ ಚಿನ್ನದ ಸರ, 2 ಗ್ರಾಂನ ಮೂಗಿನ ಬೊಟ್ಟು ಕಳವು ಮಾಡಲಾಗಿದೆ ಎಂದು ದಿವಾಕರ ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.