

ಉಡುಪಿ: ಶಿವಳ್ಳಿ ಗ್ರಾಮದ ಕುಂಜಿಬೆಟ್ಟುವಿನಲ್ಲಿ ಶಿಕ್ಷಕಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ಮಂಗಳವಾರ ರಾತ್ರಿ 6.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿದ್ದಾರೆ.
ಮನೆಯ ಮುಂಭಾಗದ ಲಾಕ್ಮಾಡಿದ ಬಾಗಿಲನ್ನು ಮೀಟಿ ತೆರೆದು ಒಳ ಪ್ರವೇಶಿಸಿ ಕಳ್ಳರು ಮನೆಯ ಬೆಡ್ರೂಮಿನಲ್ಲಿರುವ ಗೋದ್ರೇಜ್ನ ಸೇಫ್ ಲಾಕರಿನಲ್ಲಿಟ್ಟಿದ್ದ ಸುಮಾರು 6 ಪವನ್ತೂಕದ ಚಿನ್ನದ ಕರಿಮಣಿ ಸರ-1, ಸುಮಾರು 6 ಗ್ರಾಂ ತೂಕದ ಮುತ್ತಿನ ಸರ-1, ಸುಮಾರು 2ಳ ಪವನ್ತೂಕದ ಚಿನ್ನದ ಸರ-1, ಸುಮಾರು 5 ಗ್ರಾಂ ತೂಕದ ಸಣ್ಣದ ಚಿನ್ನದ ಸರ-1, ಒಂದು ಪವನ್ ತೂಕದ ಚಿನ್ನದ ಬಳೆ-2, ಒಟ್ಟು 13 ಗ್ರಾಂ ತೂಕದ ಚಿನ್ನದ ಕಿವಿಯೋಲೆಗಳು-6, ಒಟ್ಟು 6 ಗ್ರಾಂ ತೂಕದ ಚಿನ್ನದ ಉಂಗುರ-2, ಅಂದಾಜು 12 ಗ್ರಾಂ ತೂಕದ ಮಕ್ಕಳ ಸಣ್ಣ ಉಂಗುರ-12, ಒಟ್ಟು ಅಂದಾಜು 116 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಕಿನ್ನಿಮೂಲ್ಕಿ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು 8.03 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.
ಮನೆಯವರು ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದು, ಸಾಯಂಕಾಲ ಬಂದು ನೋಡಿದಾಗ ಮುಖ್ಯ ಬಾಗಿಲಿನ ಬೀಗ ಒಡೆದಿದ್ದು, ಬೆಡ್ರೂಮಿನಲ್ಲಿದ್ದ ಗ್ರೋಡೇಜ್ ಕಪಾಟಿನ ಬೀಗ್ವನ್ನು ಯಾವುದೋ ಆಯುಧದಿಂದ ಮೀಡಿ ಲಾಕರ್ನಲ್ಲಿದ್ದ , ಚಿನ್ನದ ಆಭರಣಗಳಾದ 30 ಗ್ರಾಮ್ ಹವಳದ ಸರ, 20ಗ್ರಾಮ್ ಚಿನ್ನದ ನೆಕ್ಲೇಸ್ , 24 ಗ್ರಾಮ್ 2 ಚಿನ್ನದ ಬಳೆ , 40 ಗ್ರಾಮ್ಚಿನ್ನದ ಸರ, 24 ಗ್ರಾಮ್ಚಿನ್ನ ದ ಕೈ ಖಡಗ , 4 ಗ್ರಾಂ ಚಿನ್ನದ ಉಂಗುರ , 8 ಗ್ರಾಮ್ ಚಿನ್ನದ ನಾಣ್ಯ, 8 ಗ್ರಾಮ್ ಚಿನ್ನದ ಓಲೆ ಹಾಗೂ 5 ಗ್ರಾಮ್ತೂಕದ ಬೆಳ್ಳಿಯ ಕಾಲುಚೈನ್ ಸೇರಿ ಒಟ್ಟು 160 ಗ್ರಾಮ್ ಚಿನ್ನ ಹಾಗೂ 5 ಗ್ರಾಮ್ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.