ಉಡುಪಿ ಮೀನುಗಾರರ ನಿಯೋಗದಿಂದ ಸಚಿವರ ಭೇಟಿ

udp-12-yashpal
Published on

ಉಡುಪಿ: ಜಿಲ್ಲೆಯ ಮೀನುಗಾರರ ವಿವಿಧ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್​ ಅಧ್ಯಕ್ಷ, ಶಾಸಕ ಯಶ್​ ಪಾಲ್​ ಸುವರ್ಣ ನೇತೃತ್ವದ ನಿಯೋಗದಿಂದ ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ಮೀನುಗಾರಿಕೆ ಸಚಿವ ಮಾಂಕಾಳ ವೈದ್ಯರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚಿಸಲಾಯಿತು.

ಯಾಂತ್ರಿಕ ದೋಣಿಗಳಿಗೆ ಡೀಸೆಲ್​ 500 ಲೀಟರಿಗೆ ಹೆಚ್ಚಳ ಹಾಗೂ ಡೀಸೆಲ್​ ಕೋಟಾವನ್ನು ಮಾಸಿಕದ ಬದಲು ವಾರ್ಷಿಕ ಕೋಟಾ, ನಾಡದೋಣಿಗಳಿಗೆ ವರ್ಷಪೂರ್ತಿ ಸಮರ್ಪಕ ರೀತಿಯಲ್ಲಿ ಸೀಮೆಎಣ್ಣೆ ಪೂರೈಕೆ, ಬಂದರಿನ ಡ್ರೆಜ್ಜಿಂಗ್​, ಔಟರ್​ ಹಾರ್ಬರ್​ ನಿಮಾರ್ಣ, ಸೀ ಆಂಬ್ಯುಲೆನ್ಸ್​ ಮಂಜೂರು, ಅಂತರ್​ ರಾಜ್ಯ ಸಮನ್ವಯ ಸಮಿತಿ, ಬಂದರು ಸುಗಮ ನಿರ್ವಹಣೆಯ ದೃಷ್ಟಿಯಿಂದ ಸ್ಥಳಿಯ ಸಂಘ ಸಂಸ್ಥೆಗೆ ನೀಡುವುದು, ನಾಡದೋಣಿ ತಂಗುದಾಣ ನಿಮಾರ್ಣ, ಮಲ್ಟಿ ಪಾರ್ಕಿಂಗ್​ ವ್ಯವಸ್ಥೆ, ಪರ್ಸಿನ್​ ಸಂಘಕ್ಕೆ ಬಹು ಅಂತಸ್ತು ಕಟ್ಟಡ ನಿಮಾರ್ಣಕ್ಕೆ ಜಾಗ ಮಂಜೂರು, ಟೆಗ್ಮಾ ಕಂಪೆನಿಗೆ ನೀಡಿರುವ ನಿವೇಶನದ ಗುತ್ತಿಗೆ ಅವಧಿ ಮಗಿದ ನಂತರ ಮೀನುಗಾರಿಕೆ ಇಲಾಖೆಗೆ ಹಸ್ತಾಂತರ, ಸಾಧ್ಯತಾ ಪ್ರಮಾಣ ಪತ್ರದ ಅವಧಿಯನ್ನು ಮರದ ಬೋಟಿಗೆ 5 ವರ್ಷ ನಿಗದಿ ಹಾಗೂ ಸ್ಟೀಲ್​ ಬೋಟಿಗೆ 7 ವರ್ಷಕ್ಕೆ ಕಡಿತಗೊಳಿಸುವುದು, ನಾಡದೋಣಿ ಗಳಿಗೆ ಹೈಬ್ರಿಡ್​ ಎಲೆಕ್ಟ್ರಿಕ್​ ಇಂಜಿನ್​ ಅಳವಡಿಕೆಯ ಬಗ್ಗೆ ಶ್ರೀ ಕ್ರಮಕೈಗೊಳ್ಳುವಂತೆ ಮನವಿ ನೀಡಲಾಯಿತು.

ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಮಾ ಫಾಹಿಮ್​, ಇಲಾಖೆಯ ನಿರ್ದೇಶಕ ದಿನೇಶ್​ ಕುಮಾರ್​, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಮೀನುಗಾರ ಮುಖಂಡರಾದ ಸಂತೋಷ್​ ಸಾಲ್ಯಾನ್​, ಜಗನ್ನಾಥ, ರವಿ ಸುವರ್ಣ, ಆನಂದ ಖಾರ್ವಿ, ಯಶವಂತ ಗಂಗೊಳ್ಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net