

ಉಡುಪಿ: ವಿದ್ಯುತ್ ಕಾಯ್ದೆ 2003ಕ್ಕೆ ಕೇಂದ್ರ ಸರ್ಕಾರ ತರುತ್ತಿರುವ ತಿದ್ದುಪಡಿ ವಿರುದ್ದ ಸಮಗ್ರ ಅಧ್ಯಯನ ಮಾಡದ ರೈತ ಹಾಗೂ ವಿದ್ಯುತ್ ಕಂಪನಿಗಳ ನೌಕರರ ಸಂಘಟನೆಯಿಂದ ಪ್ರತಿಭಟನೆಯನ್ನು ಇಂದು ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದೆ. ಆದರೆ ಈ ತಿದ್ದುಪಡಿ ರೈತರ, ಗ್ರಾಹಕರ ಹಿತದೃಷ್ಟಿಯಿಂದ ಅತೀ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ 9 ವರ್ಷಗಳ ಅವಧಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸಲಹಾ ಸಮಿತಿ ಸದಸ್ಯರಾಗಿದ್ದ, ಉಡುಪಿ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ.
ಪ್ರಮುಖ ಅಂಶಗಳು
ವಿದ್ಯುತ್ ಕ್ಷೇತ್ರದಲ್ಲಿ ಪೈಪೋಟಿ ಬಂದರೆ ದೂರವಾಣಿ ಕ್ಷೇತ್ರದಂತೆ ಗುಣಮಟ್ಟದ ಸುಧಾರಣೆ ಸಾಧ್ಯ.
ಆದರೂ ಮುಕ್ತ ಪರವಾನಿಗೆ ನೀಡುವುದರಿಂದ ಅನುಭವ ಇಲ್ಲದ ಕಂಪನಿಗಳು ವಿದ್ಯುತ್ ಸರಬರಾಜಿಗೆ ಬಂದರೆ ತೊಂದರೆ ಆಗಬಹುದು. ಕೆಲಸ ಮಾಡದೆ ಸಂಬಳ ಪಡೆಯುವ ನೌಕರರಿಗೆ ತೊಂದರೆ ಆಗಬಹುದು. ಮತ್ತು ಈ ಕ್ಷೇತ್ರದಲ್ಲಿ ಅದಾನಿ, ರಿಲಯನ್ಸ್ ರೀತಿಯ ಬೃಹತ್ ಕಂಪನಿಗಳು ಬಂದು ಸಣ್ಣ ಕಂಪನಿಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆದರೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ.
(ಭಾರತೀಯ ಕಿಸಾನ್ ಸಂಘ, ಉಡುಪಿ ಜಿಲ್ಲೆಯ ಪ್ರಕಟಣೆ)