

ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮಾವಳಿ ತಿದ್ದುಪಡಿ, ಅಕ್ರಮ ಸಕ್ರಮ ಅರ್ಜಿಗಳ ವಜಾ, ಸಂಧ್ಯಾ ಸುರಾ ಮತ್ತು ವೃದ್ಧಾಪ್ಯ ವೇತನ ಲಾನುಭವಿಗಳ ಕಡಿತ ಮೊದಲಾದ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಜೂನ್ 23ರಂದು ಅವಿಭಜಿತ ದ.ಕ ಜಿಲ್ಲೆಯ 399 ಗ್ರಾಪಂ ಹಾಗೂ ನಗರ ಸ್ಥಳಿಯ ಸಂಸ್ಥೆಗಳ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಪು, ಉಡುಪಿ ಮತ್ತು ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಏಕವಿನ್ಯಾಸ ನೆಗೆ ನಿಯಮಾವಳಿ ತಿದ್ದುಪಡಿ ಮಾಡಿದ್ದರಿಂದ ಸಾಮಾನ್ಯ ಜನರು ಮನೆಕಟ್ಟಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, 2000ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ. ಅಕ್ರಮ&ಸಕ್ರಮ ಸಮಿತಿಗೆ ಾರಂ ನಂ. 53 ಮತ್ತು 57ರಲ್ಲಿ ಕೃಷಿ ಚಟುವಟಿಕೆಗೆ ಸಾವಿರಾರು ಮಂದಿ ಅರ್ಜಿ ಹಾಕಿದ್ದು, ಶಾಸಕರ ಗಮನಕ್ಕೂ ಬಾರದೆ ಕಂದಾಯ ಇಲಾಖೆ ಅಧಿಕಾರಿಗಳು ತಿರಸ್ಕರಿಸುತ್ತಿದ್ದಾರೆ. ಈ ಬಗ್ಗೆ ಜಿಪಂ ಮತ್ತು ತಾಪಂ ಕೆಡಿಪಿ ಸಭೆ, ವಿಧಾನಸಭೆಯಲ್ಲಿ ಚರ್ಚೆ ನಡೆಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
21,419 ಸಂಧ್ಯಾ ಅರ್ಜಿ ತಿರಸ್ಕಾರ
ರಾಜ್ಯ ಸರ್ಕಾರ ಜೂನ್ 6ರಂದು ಹೊಸ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಒಟ್ಟು 9,04,000 ವೃದ್ಧಾಪ್ಯವೇತನ, 14,15,000 ಸಂಧ್ಯಾ ಸುರಾ ಯೋಜನೆ ಲಾನುಭವಿಗಳನ್ನು ಕೈಬಿಡಲು ತೀರ್ಮಾನಿಸಿದೆ. ಜಿಲ್ಲೆಯಲ್ಲಿ 10,960 ಮಂದಿಗೆ ವೃದ್ಧಾಪ್ಯವೇತನ ಹಾಗೂ 21,419 ಮಂದಿಗೆ ಸಂಧ್ಯಾ ಯೋಜನೆ ಪಿಂಚಣಿ ಸ್ಥಗಿತವಾಗಲಿದೆ. ಈ ಮೂಲಕ ಇಳಿವಯಸ್ಸಿನಲ್ಲಿ ಸಾಮಾನ್ಯ ಜನರಿಗೆ ತೊಂದರೆ ನೀಡಲು ಮುಂದಾಗಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಸರ್ಕಾರಕ್ಕೆ ಪಿಂಚಣಿ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಮಾಜಿ ಅಧ್ಯಕ್ಷರಾದ ಸುರೇಶ್ ನಾಯಕ್, ಮಟ್ಟಾರು ರತ್ನಾಕರ ಹೆಗ್ಡೆ, ರಾಜೇಶ್ ಕಾವೇರಿ, ನಿಲೇಶ್, ಉದಯ್ ಕುಮಾರ್ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಮೊದಲಾದವರು ಉಪಸ್ಥಿತರಿದ್ದರು.