ಜಿಲ್ಲಾ ಯುವಬ್ರಾಹ್ಮಣ ಪರಿಷತ್​ ಮನೆ ಹಸ್ತಾಂತರ

IMG-20231128-WA0001
Published on

ಉಡುಪಿ: ಜಿಲ್ಲಾ ಯುವಬ್ರಾಹ್ಮಣ ಪರಿಷತ್​ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಅಶ್ವಿನಿ ಭಟ್​ ರವರಿಗೆ ಚಿಟ್ಪಾಡಿಯ ಭಾಗ್ಯಮಂದಿರ ಪರಿಸರದಲ್ಲಿ ನಿರ್ಮಿಸಿಕೊಟ್ಟ ಮನೆಯನ್ನು ನ.30 ರಂದು ಸಾಯಂಕಾಲ 5.30ಕ್ಕೆ ಶಿರೂರು ಶ್ರೀ ವೇದವರ್ಧನತೀರ್ಥರು ಹಸ್ತಾಂತರಿಸಲಿದ್ದಾರೆ ಎಂದು ಪರಿಷತ್​ ನಿಕಟಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


25 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಸವಿನೆನಪಿಗಾಗಿ ಪೇಜಾವರ ಶ್ರೀ ವಿಶ್ವಪ್ರಸನ್ನತಿರ್ಥರ ರಾಮರಾಜ್ಯದ ಪರಿಕಲ್ಪನೆಯಿಂದ ಪ್ರೇರಣೆಗೊಂಡು "ಮಾತೃ ಪ್ರಿಯಾ" ಎಂಬ ಮನೆಯನ್ನು 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ಹಸ್ತಾಂತರಿಸುತ್ತಿದ್ದೇವೆ. ರಮೇಶ್​ ಭಟ್​ ಮೂಡುಬೆಟ್ಟು ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ ಎಂದರು.


ಡಿ.10ರಂದು ಬ್ರಾಹ್ಮೀ ಸಭಾಭವನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದ್ದು, ವಿಶಿಷ್ಟ ಸಾಧನೆಗೈದ ವಿಪ್ರ ಸಮಾಜದ ಓರ್ವ ಸಾಧಕರಿಗೆ ವಿಪ್ರವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.


ಜಿಲ್ಲಾ ಯುವಬ್ರಾಹ್ಮಣ ಪರಿಷತ್​ ಅಧ್ಯಕ್ಷ ಚಂದ್ರಕಾಂತ್​ ಕೆ.ಎನ್​., ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ರುಪತಿ ರಾವ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net