

ಪ್ರಶಾಂತ ಭಾಗ್ವತ ಉಡುಪಿ
ಅನೇಕ ವಿಶ್ವ ದಾಖಲೆಗಳು ಭಾರಿ ಅಬ್ಬರದೊಂದಿಗೆ ದೇಶದ ಗಮನ ಸೆಳೆಯುತ್ತದೆ. ಆದರೆ, ಯಾವುದೇ ಸದ್ದಿಲ್ಲದೆ ಹೊಲಿಗೆ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಹಾಗೂ ಉಡುಪಿ ಜಿಲ್ಲೆಯ ನಾರಿಯರು ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಬೆಂಗಳೂರಿನಲ್ಲಿ ಆ.10ರಂದು ನಡೆದ ಅಂತಾರಾಷ್ಟ್ರೀಯ ಆರಿ ಕಾರ್ಮಿಕರ 2ನೇ ಸಮ್ಮೇಳನದ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಕನಾಟಕ ರಾಜ್ಯವು ನೋಬೆಲ್ ವರ್ಲ್ಡ್ ರೆಕಾರ್ಡ್ ಮತ್ತು ಒಸ್ಕರ್ಸ್ ವರ್ಲ್ಡ್ ರೆಕಾರ್ಡ್ನಲ್ಲಿ ಸಮೂಹ ದಾಖಲೆಯೊಂದಿಗೆ ಪರಾಕ್ರಮ ಮೆರೆದಿದೆ.
ಸ್ವಾತಂತ್ರ್ಯೋತ್ಸವದ ನಿಮಿತ್ತ ಕೈ ಹೊಲಿಗೆ (ಆರಿ ವರ್ಕ್)ಯಲ್ಲಿ ದಾಖಲೆ ಮಾಡಲು 1 ಗಂಟೆ 30 ನಿಮಿಷ ಅವಧಿಯ ಇಂಡಿಪೆಂಡೆನ್ಸ್ ಡೇ ವಿಷಯ ಸ್ಪರ್ಧೆ ನೀಡಲಾಗಿತ್ತು. ಸಮಯದೊಳಗೆ ಪೂರ್ಣಗೊಳಿಸಿದ ಟಾಪ್ ಟೆನ್ ಪಟ್ಟಿಯಲ್ಲಿ ಉಡುಪಿ ಜಿಲ್ಲೆ ಪ್ರಥಮ ಹಾಗೂ 6ನೇ ಸ್ಥಾನ ಗಳಿಸುವ ಮೂಲಕ ವಿಶ್ವ ದಾಖಲೆ ಬರೆದಿದೆ.
ಬೆಂಗಳೂರಿನಲ್ಲಿ ಕರ್ನಾಟಕ ಆರಿ ವರ್ಕರ್ಸ್ ಕೌನ್ಸಿಲ್ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಕರ್ನಾಟಕದಿಂದ 3 ಸಾವಿರಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು. ಉಡುಪಿ ಜಿಲ್ಲೆಯಿಂದ 278 ಮಹಿಳೆಯರು, ದಕ್ಷಿಣ ಕನ್ನಡದಿಂದ 128 ಮಹಿಳೆಯರು ಭಾಗವಹಿಸಿದ್ದರು. ಮಹಿಳೆಯರಿಗೆ ಉತ್ತೇಜನ ನೀಡಲು ಸಮ್ಮೇಳನ ಆಯೋಜಿಸಲಾಗಿತ್ತು. | ಅನುಪಮಾ ವೆಂಕಟೇಶ. ಉಡುಪಿ ಜಿಲ್ಲಾ ಆರಿ ಕೌನ್ಸಿಲ್ನ ಕಾರ್ಯದರ್ಶಿ ನಮ್ಮ ಸಿದ್ಧಿ ಸ್ವೀಯಿಂಗ್ ಸ್ಕೂಲ್ ಉಡುಪಿಯ 24 ವಿದ್ಯಾರ್ಥಿಗಳು ನೊಬೆಲ್ ಹಾಗೂ ಆಸ್ಕರ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೆಸರು ದಾಖಲಿಸಿ ಪ್ರಮಾಣ ಪತ್ರ, ಪದಕ ಗಳಿಸಿದ್ದಾರೆ. ತನ್ಮೂಲಕ ಭಾರತೀಯ ಆರಿ ಕಾರ್ಮಿಕರ ಫೆಡರೇಶನ್ನಲ್ಲಿಯೂ ನೋಂದಾಯಿತರಾಗಿದ್ದಾರೆ. | ರಮ್ಯಾ ಎ.ಸಿ. ಉತ್ತಮ ಶಿಕ್ಷಕಿ ಪ್ರಶಸ್ತಿಯ ಸಾಧಕಿ, ಉಡುಪಿ