ಎಸ್​ಎಸ್​ಎಲ್​ಸಿ, ರಾಜ್ಯಕ್ಕೆ ಉಡುಪಿ ದ್ವಿತೀಯ ಸ್ಥಾನ

SSLC Top
Published on

ಸಂಪೂರ್ಣ ಅಂಕ ಗಳಿಸಿದ ಸ್ವಸ್ತಿ ಕಾಮತ ಪ್ರಥಮ

ಜಿಲ್ಲೆಯಲ್ಲಿ ಸಾಧಕ ವಿದ್ಯಾರ್ಥಿಗಳ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಕಳೆದ ವರ್ಷದ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದ ಉಡುಪಿ ಜಿಲ್ಲೆ ಈ ಬಾರಿ 'ಅಗ್ರ ಸ್ಥಾನ'ದಿಂದ ವಂಚಿತವಾಗಿದ್ದು, 2ನೇ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ. ಕಳೆದ ವರ್ಷ ಶೇ.94 ಫಲಿತಾಂಶ ಗಳಿಸಿದ್ದ ಜಿಲ್ಲೆ, ಈ ಬಾರಿ 89.96 ಫಲಿತಾಂಶ ಗಳಿಸಿದೆ. ಕಳೆದ ಬಾರಿಗಿಂತ 4.04 ಫಲಿತಾಂಶ ಕುಸಿದು, ದ್ವಿತೀಯ ಸ್ಥಾನ ಗಳಿಸಿದೆ.

2024-25ನೇ ಸಾಲಿನ ಫಲಿತಾಂಶದಲ್ಲೂ ಸಹ ಪ್ರಥಮ ಸ್ಥಾನ ಉಳಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಶೈಕ್ಷಣಿಕ ವರ್ಷದ ಆರಂಭದ ಮೊದಲ ದಿನದಿಂದಲೇ ವಿದ್ಯಾರ್ಥಿಗಳಿಗೆ ವಿಶೇಷ ರೀತಿಯಲ್ಲಿ ಕಲಿಕೆಗೆ ಹೊಂದಿಸಲಾಗಿತ್ತು. ಶಿಕ್ಷಣ ಇಲಾಖೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ನಿರೀಕ್ಷಿತ ಪ್ರಥಮ ಸ್ಥಾನ ದಕ್ಕದಿದ್ದರೂ ತೀರಾ ಕಳಪೆ ಮಟ್ಟಕ್ಕೆ ಇಳಿಯದೆ ದ್ವಿತೀಯ ಸ್ಥಾನ ಗಳಿಸಿಕೊಂಡ ಹೆಮ್ಮೆ ಉಡುಪಿ ಜಿಲ್ಲೆಗೆ ಲಭಿಸಿದೆ.

1,364 ಮಕ್ಕಳು ಅನುತ್ತೀರ್ಣ

ಈ ಬಾರಿ ಒಟ್ಟು 13,579 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 12,215 ಮಕ್ಕಳು ಉತ್ತೀರ್ಣರಾಗಿದ್ದು, 1,364 ಮಂದಿ ಅನುತ್ತೀರ್ಣ (ಗೈರು ಸೇರಿ) ಆಗಿದ್ದಾರೆ.

ಗಮನ ಸೆಳೆದ ಚತುರ್ಥ ಸ್ಥಾನಿಗಳು

ಉಡುಪಿಯ ಸರ್ಕಾರಿ ಜೂನಿಯರ್​ ಕಾಲೇಜಿನ ವಿದ್ಯಾರ್ಥಿನಿ ಸೃಷ್ಟಿ ಆಚಾರ್​, ಕುಂದಾಪುರದ ವಿಕೆಆರ್​ ಆಚಾರ್ಯ ಮೆಮೋರಿಯಲ್​ ಇಂಗ್ಲಿಷ್​ ಮೀಡಿಯಂ ಹೈಸ್ಕೂಲ್​ನ ವಿದ್ಯಾರ್ಥಿ ಬಿ.ವಿ ಜಯಸೂರ್ಯ ಮತ್ತು ವಿದ್ಯಾರ್ಥಿನಿ ಪ್ರಿಯಾ ಪಿ., ಕುಂದಾಪುರದ ಶ್ರೀ ವೆಂಕಟರಮಣ ಇಂಗ್ಲಿಷ್​ ಮೀಡಿಯಂ ಹೈಸ್ಕೂಲ್​ನ ವಿದ್ಯಾರ್ಥಿ ಹರಿಪ್ರಸಾದ ಎಂ.ಎಸ್​. ಮತ್ತು ವಿದ್ಯಾರ್ಥಿನಿ ಸಾಯಿಕೀರ್ತನಾ, ಕಾರ್ಕಳದ ಶ್ರೀಮದ್​ ಭುವನೇಂದ್ರ ಇಂಗ್ಲಿಷ್​ ಮೀಡಿಯಂ ಹೈಸ್ಕೂಲ್​ನ ವಿದ್ಯಾರ್ಥಿನಿ ಮಾನ್ಸಿ ಪಿ. ನಾಯಕ ಹಾಗೂ ಕುಂದಾಪುರದ ವಿದ್ಯಾರಣ್ಯ ಇಂಗ್ಲಿಷ್​ ಮೀಡಿಯಂ ಸ್ಕೂಲ್​ನ ವಿದ್ಯಾರ್ಥಿ ಆಯುಷ್​ ಯು. ಶೆಟ್ಟಿ ತಲಾ 622 ಅಂಕ ಗಳಿಸುವ ಮೂಲಕ ರಾಜ್ಯ ಹಾಗೂ ಜಿಲ್ಲೆಗೆ ಚತುರ್ಥ ಸ್ಥಾನ ಗಳಿಸಿದ್ದಾರೆ.

ಟಾಪ್​ ತ್ರೀ ವಿದ್ಯಾರ್ಥಿಗಳು

ಕಾರ್ಕಳದ ಜ್ಞಾನಸುಧಾ ಇಂಗ್ಲಿಷ್​ ಮೀಡಿಯಂ ಹೈಸ್ಕೂಲ್​ನ ವಿದ್ಯಾರ್ಥಿನಿ ಸ್ವಸ್ತಿ ಕಾಮತ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಗಳಿಸಿದ್ದಾಳೆ. ಕಾರ್ಕಳದ ಕ್ರಿಸ್ಟ್​ಕಿಂಗ್​ ಇಂಗ್ಲಿಷ್​ ಮೀಡಿಯಂ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಕೃತಿ ಪಿ.ಗುಡಿಗಾರ 624 ಅಂಕ ಹಾಗೂ ಗಂಗೊಳ್ಳಿಯ ಎಸ್​ವಿಎಸ್​ ಇಂಗ್ಲಿಷ್​ ಮೀಡಿಯಂ ಹೈಸ್ಕೂಲ್​ನ ಸುಶ್ಮಿತಾ ಎಸ್​. ಗಾಣಿಗ 624 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕುಂದಾಪುರದ ವಿಕೆಆರ್​ ಆಚಾರ್ಯ ಮೆಮೋರಿಯಲ್​ ಇಂಗ್ಲಿಷ್​ ಮೀಡಿಯಂ ಹೈಸ್ಕೂಲ್​ನ ವಿದ್ಯಾರ್ಥಿನಿ ಸಾಯಿಸ್ಪರ್ಷಾ ಕೆ., ಕಾರ್ಕಳದ ಜೈಸೀಸ್​ ಇಂಗ್ಲಿಷ್​ ಮೀಡಿಯಂ ಹೈಸ್ಕೂಲ್​ನ ವರ್ಷಿಣಿ ಎಸ್​ ರೈ., ಕೋಟಾದ ವಿವೇಕ ಇಂಗ್ಲಿಷ್​ ಮೀಡಿಯಂ ಹೈಸ್ಕೂಲ್​ನ ನಿಧಿ ಪೈ ಎಂ., ಉಡುಪಿ (ಸೌತ್​)ಯ ಶ್ರೀ ಅನಂತೇಶ್ವರ ಇಂಗ್ಲಿಷ್​ ಮೀಡಿಯಂ ಸ್ಕೂಲ್​ನ ಕೆ.ಶ್ರೀನಿತ್​ ಎಸ್​. ಶೇರಿಗಾರ ಹಾಗೂ ಕುಂದಾಪುರದ ವಿದ್ಯಾರಣ್ಯ ಇಂಗ್ಲಿಷ್​ ಮೀಡಿಯಂ ಸ್ಕೂಲ್​ನ ವಿದ್ಯಾರ್ಥಿನಿ ಪ್ರವ್ಯಾ ಪಿ. ಶೆಟ್ಟಿ ತಲಾ 623 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net