

ವಿಜಯವಾಣಿ ಸುದ್ದಿಜಾಲ ಉಡುಪಿ
ಸಂಗೀತದಿಂದ ಸಕಲ ಸಂಸ್ಕೃತಿ, ಸಂಸ್ಕಾರ, ಸಂತೋಷ ಹಾಗೂ ಸಮಾಧಾನ ಲಭಿಸುತ್ತದೆ. ಹೀಗಾಗಿ ಯುವಪೀಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಕಲಾಶ್ರೀ, ಸಂಗೀತ ಗುರು ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯಂ ಕರೆ ನೀಡಿದರು.
ಉಡುಪಿ ಗುಂಡಿಬೈಲಿನ ಬ್ರಾಹ್ಮಿ ಸಭಾಭವನದಲ್ಲಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಭಕ್ತಿ ಸಂಗೀತ ಸ್ಪರ್ಧೆ 'ಸಂಗೀತ ಸಂಭ್ರಮ-2024' ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಂತಾ ಇಲೆಕ್ಟ್ರಿಕಲ್ ಪೆ.ಲಿ.ನ ಎಂಡಿ ಉಚ್ಚಿಲ ಶ್ರೀಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ವಿದುಷಿ ಉಷಾ ಹೆಬ್ಬಾರ್ ಸ್ಪರ್ಧೆಯ ನೀತಿ, ನಿಯಮ ವಿವರಿಸಿದರು. ತೀರ್ಪುಗಾರರಾಗಿ ಉಡುಪಿಯ ವಿದ್ವಾನ್ ಬಾಲಸುಬ್ರಹ್ಮಣ್ಯಂ, ವಿದುಷಿ ವಾರಿಜಾಕ್ಷಿ ಭಟ್, ವಿದ್ವಾನ್ ರಾಘವೇಂದ್ರ ಆಚಾರ್ಯ, ವಿದುಷಿ ಲಲಿತಾ ಕಲ್ಕೂರ್, ವಿದ್ವಾನ್ ಶ್ರೀಧರ ಆಚಾರ್ಯ ಹಾಗೂ ವಿದ್ವಾನ್ ನಟರಾಜ್ ಸಹಕರಿಸಿದರು.
ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿದರು. ಅಧ್ಯಕ್ಷ ಚಂದ್ರಕಾಂತ್ ಕೆ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ವಂದಿಸಿದರು. ದಿವ್ಯಾ ಪಾಡಿಗಾರು ಕಾರ್ಯಕ್ರಮ ನಿರೂಪಿಸಿದರು.
5ರಿಂದ 10 ವರ್ಷ: ಶ್ರೀಪಾಲ ಭಟ್ ಗುಂಡಿಬೈಲ್ (ಪ್ರ), ಪ್ರಣತಿ ನಾವಡ ತ್ರಾಸಿ (ದ್ವಿ), ಸಾಂಘವಿ ಹಿಳ್ಳೆಮನೆ ಮಣಿಪಾಲ (ತೃ), ಸಮಾಧಾನಕರ- ಸಾನ್ವಿ ಭಟ್ ಅಂಬಲಪಾಡಿ ಮತ್ತು ಕೃತಿ ಭಟ್ ಕನ್ನರ್ಪಾಡಿ.
10ರಿಂದ 15 ವರ್ಷ: ಪರ್ಜನ್ಯ ಕೆ. ರಾವ್ ಕಡಿಯಾಳಿ (ಪ್ರ), ಪ್ರಾರ್ಥನಾ ಬೈಲೂರು (ದ್ವಿ), ಸ್ವಸ್ತಿ ಎಂ. ಭಟ್ ಪರ್ಕಳ (ತೃ), ಸಮಾಧಾನಕರ- ಪ್ರಣವ್ ಅಡಿಗ ಅಂಬಲಪಾಡಿ.
15ರಿಂದ 18 ವರ್ಷ: ಭಾರ್ಗವಿ ಎಚ್.ಕೆ. ಬೈಲೂರು (ಪ್ರ), ಸುಮದ್ವ ತಂತ್ರಿ ಮುಚ್ಚಿಲ್ ಕೋಡು (ದ್ವಿ), ಪ್ರಾರ್ಥನಾ ಪರ್ಕಳ (ತೃ). ಸಮಾಧಾನಕರ- ಅಮೃತ ಜಿ ಅಲೆವೂರು.
18+ ವರ್ಷ: ಪ್ರಸನ್ನ ರಾಮಕೃಷ್ಣ ಭಟ್ ಉಡುಪಿ (ಪ್ರ), ಸುಮೇಧಾ, ಕುಕ್ಕಿ ಕಟ್ಟೆ (ದ್ವಿ), ಚಿತ್ಕಲಾ ಎಚ್. ಪರ್ಕಳ (ತೃ). ಸಮಾಧಾನಕರ- ಡಾ. ಸುಪ್ರಭಾ ಬೈಲೂರು. ವಿಜೇತರಿಗೆ ಪ್ರಥಮ 5 ಸಾವಿರ ರೂ., ದ್ವಿತೀಯ 3 ಸಾವಿರ ರೂ. ತೃತೀಯ 2 ಸಾವಿರ ರೂ. ಹಾಗೂ ಸಮಾಧಾನಕರ 1 ಸಾವಿರ ರೂ. ನಗದು, ಬಹುಮಾನ, ಸ್ಮರಣಿಕೆ ಮತ್ತು ಅಭಿನಂದನಾ ಪತ್ರ ನೀಡಲಾಯಿತು. 146 ಸ್ಪರ್ಧಿಗಳು ಭಾಗವಹಿಸಿದ್ದರು.
ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ವಿಜಯ ಗ್ರೂಪ್ ಸಂಸ್ಥೆಗಳ ಅಧ್ಯಕ್ಷ ವಿಜಯ ರಾಘವ ರಾವ್ ಮಾತನಾಡಿ, ವಿಪ್ರರಿಗಾಗಿ ಇಂತಹ ಭಕ್ತಿ ಸಂಗೀತ ಹಾಗೂ ಇತರ ಸ್ಪರ್ಧೆಗಳನ್ನು ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದಲ್ಲೂ ಪರಿಷತ್ನವರು ಹಮ್ಮಿಕೊಳ್ಳುವಂತಾಗಲಿ ಎಂದು ಹಾರೈಸಿದರು. ಪರಿಷತ್ ಅಧ್ಯಕ್ಷ ಚಂದ್ರಕಾಂತ್ ಕೆ.ಎನ್., ಭೀಮ ಜುವೆಲ್ಲರ್ಸ್ನ ವಲಯ ವಕ್ತಾರ ಕಾರ್ತಿಕ್ ರಾವ್ ಉಪಸ್ಥಿತರಿದ್ದರು. ನಿಟ್ಟೂರು ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಶ್ರೀನಿವಾಸ್ ಭಟ್ ಅಂಬಾಗಿಲು ಅವರನ್ನು ಸನ್ಮಾನಿಸಲಾಯಿತು. ಪರಿಷತ್ನ ಮಾಜಿ ಅಧ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರು ಸ್ವಾಗತಿಸಿದರು. ಪ್ರ.ಕಾ. ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ವಿವೇಕಾನಂದ ಪಾಂಗಣ್ಣಾಯ ನಿರೂಪಿಸಿದರು.