ವಾರ್ತಾ ಇಲಾಖೆ ಸಿಬ್ಬಂದಿ ಪ್ರೇಮಾನಂದಗೆ ಸನ್ಮಾನ...

Sanmaana
Published on

ಉಡುಪಿ ಪತ್ರಿಕಾ ಭವನ ಸಮಿತಿಯಿಂದ ಗೌರವ

ವಿಜಯವಾಣಿ ಸುದ್ದಿಜಾಲ ಉಡುಪಿ

ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ 25 ವರ್ಷ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸಿಬ್ಬಂದಿ ಪ್ರೇಮಾನಂದ ಅವರನ್ನು ಉಡುಪಿ ಪತ್ರಿಕಾ ಭವನ ಸಮಿತಿ ವತಿಯಿಂದ ಜುಲೈ 14ರಂದು ಸನ್ಮಾನಿಸಲಾಯಿತು.

ಮೊಬೈಲ್​, ಇಂಟರ್​ನೆಟ್​ ಸೌಲಭ್ಯ ಇಲ್ಲದ ಕಾಲದಲ್ಲಿ ರಾಜ್ಯ ಸರ್ಕಾರ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಕಟಣೆಗಳನ್ನು ಪ್ರತಿದಿನ ಉಡುಪಿ ನಗರ, ಮಣಿಪಾಲ, ಕುಕ್ಕಿಕಟ್ಟೆ ಸಹಿತ ವಿವಿಧಡೆಗಳಲ್ಲಿದ್ದ ಪತ್ರಿಕಾ ಕಚೇರಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪಿಸುತ್ತಿದ್ದರು. ಅವರ ಆ ಸೇವೆಯನ್ನು ಉಡುಪಿಯ ಹಿರಿಯ ಪತ್ರಕರ್ತರು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ಕರ ಸಂಘದ ಅಧ್ಯಕ್ಷ ರಾಜೇಶ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ, ಕೋಶಾಧಿಕಾರಿ ಉಮೇಶ ಮಾರ್ಪಳ್ಳಿ, ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ ಆರಾಡಿ, ಹಿರಿಯ ಪತ್ರಕರ್ತರಾದ ಬಿ.ಬಿ. ಶೆಟ್ಟಿಗಾರ, ಸುಭಾಶ್ಚಂದ್ರ ವಾಗ್ಳೆ ಇನ್ನಿತರ ಪತ್ರಕರ್ತರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಶಶಿಧರ ಮಾಸ್ತಿಬೈಲು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net