

ವಿಜಯವಾಣಿ ಸುದ್ದಿಜಾಲ ಉಡುಪಿ
ತುಂಡು ಭೂಮಿ ಹಿಡುವಳಿದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಉಡುಪಿ ಜಿಲ್ಲೆಯಲ್ಲಿ ಸೂಕ್ತ ಮಾಹಿತಿಯ ಕೊರತೆಯಿಂದಾಗಿಯೇ ಕೃಷಿ ನಷ್ಟದಾಯಕವಾಗುತ್ತಿದೆ. ಕೃಷಿಯಲ್ಲಿ ತೊಡಗುವಂತೆ ಸರ್ಕಾರಗಳು ಯುವ ಜನತೆಗೆ ಯಾವುದೇ ಯೋಜನೆ ರೂಪಿಸದ್ದರಿಂದ ಇಂದಿನವರು ಕೃಷಿಯಿಂದ ವಿಮುಖರಾಗಿ ಜಮೀನುಗಳು ಹಡಿಲು ಬೀಳುತ್ತಿದೆ ಎಂದು ನಿವೃತ್ತ ಶಿಕ್ಷಕ, ಆರೂರು ಗ್ರಾಪಂ ಸದಸ್ಯ ರತ್ನಾಕರ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ಕೃಷಿಕ ಸಂಘವು ಆರೂರು ಹೆಬ್ಬಾರಬೆಟ್ಟು ಆಶಾ ನಿಲಯದಲ್ಲಿ ಜುಲೈ 28ರಂದು ಆಯೋಜಿಸಿದ್ದ ವೈಜ್ಞಾನಿಕ ತೆಂಗು ಮತ್ತು ಅಡಕೆ ಬೇಸಾಯ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಗತಿಪರ ಕೃಷಿಕ ಬೆರಂಬೈಲು ಉದಯಕುಮಾರ್ ಶೆಟ್ಟಿ ಚೇರ್ಕಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಆರೂರು ಗ್ರಾಪಂ ಅಧ್ಯಕ್ಷ ಗುರುರಾಜ ರಾವ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಧರ ಶೆಟ್ಟಿ ಮುಂಡ್ಕಿನ ಜಡ್ಡು, ಚೇರ್ಕಾಡಿ ಗ್ರಾಪಂ ಸದಸ್ಯ ಹರೀಶ ಶೆಟ್ಟಿ, ಅರುಣ ಶೆಟ್ಟಿ ಕುರುಡುಂಜೆ, ಆನಂದ ಶೆಟ್ಟಿ ಕುದ್ಕುಂಜೆ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಅವರು ವೈಜ್ಞಾನಿಕವಾಗಿ ತೆಂಗು ಹಾಗೂ ಅಡಕೆ ಕೃಷಿ ಮಾಡುವ ಸುಲಭ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕುರುಡುಂಜೆ ರತ್ನಾಕರ ಶೆಟ್ಟಿ, ರಮೇಶ ಶೆಟ್ಟಿ, ಸುಂದರ ಶೆಟ್ಟಿ, ಸಂತೋಷ ಶೆಟ್ಟಿ, ರೇವತಿ ಶೆಟ್ಟಿ ಹೆಬ್ಬಾರಬೆಟ್ಟು, ಉಮೇಶ ಭಟ್, ಗಣೇಶ ನಾಯ್ಕ ಗೋರ್ಪಾಡಿ, ಮಮತಾ ಶೆಟ್ಟಿ ಆಲುಂಜೆ, ಸುಧೀರ ಶೆಟ್ಟಿ ಕುದ್ಕುಂಜೆ, ಕರುಣಾಕರ ಶೆಟ್ಟಿ ಹಾವಂಜೆ, ಅಮೃತಕುಮಾರ್ ಚೇರ್ಕಾಡಿ, ಮಡಿ ಸಂತೋಷ ಶೆಟ್ಟಿ ಇನ್ನಿತರರು ಪಾಲ್ಗೊಂಡಿದ್ದರು.
ನಯನಾ ಮತ್ತು ಸುಚಿತ್ರಾ ಪ್ರಾರ್ಥಿಸಿದರು. ರತ್ನಾಕರ ಶೆಟ್ಟಿ ಸ್ವಾಗತಿಸಿದರು. ಆನಂದ ಶೆಟ್ಟಿ ಚಿತ್ತೂರು ಕಾರ್ಯಕ್ರಮ ನಿರ್ವಹಿಸಿದರು.