ವಿಕಸಿತ ಭಾರತಕ್ಕೆ ಜಿಎಸ್​ಟಿ ಸುಧಾರಣೆ ಗರಿ

BJP
Published on

ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅಭಿಪ್ರಾಯ

ಉಡುಪಿ ಜಿಲ್ಲಾದ್ಯಂತ ಜಾಗೃತಿ, ಸಂಭ್ರಮಾಚರಣೆ ಶೀಘ್ರ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೇಂದ್ರ ಬಿಜೆಪಿ ಸರ್ಕಾರ ಜಿಎಸ್​ಟಿಯಲ್ಲಿ ಸುಧಾರಣಾ ಕ್ರಮ ಕೈಗೊಂಡಿರುವುದರಿಂದ ಅತ್ಯಂತ ತ್ವರಿತ ಗತಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಯಲಿದೆ. ಇದು ಭಾರತದ ಪ್ರಗತಿಗೆ ಇನ್ನಷ್ಟು ವೇಗ ನೀಡಲಿದ್ದು, ವಿಕಸಿತ ಭಾರತವಾಗುವಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಈ ಮಹತ್ವದ ನಿರ್ಣಯವನ್ನು ಜನಮಾನಸಕ್ಕೆ ತಲುಪಿಸಲು ಜಿಲ್ಲಾದ್ಯಂತ ಕಾರ್ಯಾಗಾರ, ಜಾಗೃತಿ ಹಾಗೂ ಸಂಭ್ರಮಾಚರಣೆ ಶೀಘ್ರ ಮಾಡಲಾಗುವುದು ಎಂದರು.

ವಿಶ್ವದ ದೊಡ್ಡಣ್ಣ ಅಮೆರಿಕಕ್ಕೂ ಸೆಡ್ಡು

Modi
ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕವೂ ಸಹ ಭಾರತದಲ್ಲಿನ ಅಭಿವೃದ್ಧಿಯ ನಾಗಾಲೋಟ ಸಹಿಸದೆ ಭಾರತಕ್ಕೆ ಗರಿಷ್ಠ ಶೇ.50 ತೆರಿಗೆ ವಿಧಿಸಿದೆ. ತನ್ಮೂಲಕ ಭಾರತದ ಅಭಿವೃದ್ಧಿಯ ವೇಗ ತಡೆಯಲು ಯತ್ನಿಸಿದೆ. ಆದರೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದಕ್ಕೆ ತಕ್ಕುದಾದ ಸಕಾಲಿಕ ನಿರ್ಣಯ ತೆಗೆದುಕೊಂಡಿದೆ. ಸುಮಾರು 390ಕ್ಕಿಂತಲೂ ಹೆಚ್ಚಿನ ವಸ್ತುಗಳ ತೆರಿಗೆ ಕಡಿತಗೊಳಿಸುವ ಮೂಲಕ ದೇಶದ ರೈತರು, ಯುವ ಜನರು ಮತ್ತು ಸಣ್ಣ ಉದ್ದಿಮೆದಾರರ ಹಿತ ರಕ್ಷಣೆಗೆ ಮುಂದಾಗಿದ್ದಾರೆ ಎಂದರು.

ಜಿಎಸ್​ಟಿ ದರ ಕಡಿತವು ದೇಶವಾಸಿಗಳಿಗೆ ನವರಾತ್ರಿ, ದೀಪಾವಳಿ ಹಬ್ಬದ ಕೊಡುಗೆಯಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಪ್ರಕ್ರಿಯೆ ಯಶಸ್ವಿಯಾಗಲು ಎಲ್ಲ ವಸ್ತುಗಳ ತಯಾರಕರು ಪ್ಯಾಕಿಂಗ್​ಗಳ ಮೇಲೆ ಇಳಿಕೆಯಾದ ಹೊಸ ದರ ಪ್ರಿಂಟ್​ ಮಾಡಿಸಬೇಕು. ಗ್ರಾಹಕರೂ ಸಹ ಕಡಿತಗೊಳಿಸಿದ ಬೆಲೆಯಲ್ಲಿಯೇ ವಸ್ತು ಖರೀದಿಸಬೇಕು. ಪ್ರಮುಖವಾಗಿ ದೇಸೀಯ ವಸ್ತುಗಳನ್ನೇ ಖರೀದಿಸಿ ಆತ್ಮ ನಿರ್ಭರತೆಗೆ ಪ್ರೋತ್ಸಾಹ ನೀಡಬೇಕು. | ಕುತ್ಯಾರು ನವೀನ್​ ಶೆಟ್ಟಿ. ಬಿಜೆಪಿ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net