

ಉಡುಪಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಡುಪಿ ಆಶ್ರಯದಲ್ಲಿ ಕಾತ್ಯಾಯಿನಿ ಮಂಟಪ ಕಡಿಯಾಳಿ ಉಡುಪಿ ಇದರ ನವರಾತ್ರಿ ಪ್ರಯುಕ್ತ 6ನೇ ವರ್ಷದ ಉಡುಪಿ&ದ.ಕ ಜಿಲ್ಲೆಯ ಅತಿದೊಡ್ಡ ದಾಂಡಿಯಾ ನೃತ್ಯ ಕಾರ್ಯಕ್ರಮ ಎಂಜಿಎಂ ಮೈದಾನದಲ್ಲಿ ಶನಿವಾರ ರಾತ್ರಿ ಅದ್ದೂರಿಯಾಗಿ ನಡೆಯಿತು.
ಸಾವಿರಾರು ಮಹಿಳೆಯರು ದಾಂಡಿಯಾ ನೃತ್ಯದಲ್ಲಿ ಪಾಲ್ಗೊಂಡು ಉಡುಪಿ ದಾಂಡಿಯಾ ಕಾರ್ಯಕ್ರಮದ ರಂಗು ಹೆಚ್ಚಿಸಿದರು.
ಮಹಿಳೆಯರು, ಯುವಕ-ಯುವತಿಯರು, ಕಾಲೇಜು ವಿದ್ಯಾರ್ಥಿಗಳು ಕೋಲಾಟ ನಡೆಸುತ್ತ, ಹಿನ್ನೆಲೆ ಸಂಗೀತಕ್ಕೆ ಹೆಜ್ಜೆ ಹಾಕಿ ಉತ್ಸವದ ಕಿಚ್ಚು ಹೆಚ್ಚಿಸಿದರು. ಸಾವಿರಾರು ಜನರು ದಾಂಡಿಯಾ ನೃತ್ಯ ವೀಸಿದರು. ಆಭರಣ ಜ್ಯುವೆಲ್ಲರ್ಸ್ನ ಸಂಧ್ಯಾ ಎಸ್. ಕಾಮತ್ ಹಾಗೂ ಜಯಲಕ್ಷಿ ಸಿಲ್ಕ್ ಮಾಲೀಕ ಅಪರ್ಣಾ ಆರ್. ಹೆಗಡೆ, ಜಯಲಕ್ಷಿ ವಿ. ಹೆಗಡೆ ಉಡುಪಿ ದಾಂಡಿಯಾಕ್ಕೆ ಚಾಲನೆ ನೀಡಿದರು.
ಆಭರಣ ಜುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ಈ ಬಾರಿ 6ನೇ ವರ್ಷದ ಉಡುಪಿ ದಾಂಡಿಯಾ ಆಯೋಜಿಸಿದ್ದೇವೆ. ಇದು ಗುಜರಾತ್ ಮೂಲದ ಕಲೆಯಾದರೂ ನಮ್ಮ ನಾಡಿನ ಮಹಿಳೆಯರೂ ನವರಾತ್ರಿ ಸಂದರ್ಭದಲ್ಲಿ ಖುಷಿಯಿಂದ ನೃತ್ಯ ಮಾಡಿ ದೇವಿಯ ಆರಾಧನೆ ಮಾಡುವಂತಾಗಬೇಕು ಎಂದು ಆಯೋಜಿಸಿದ್ದೇವೆ. 10 ವರ್ಷದ ಒಳಗಿನ ಮಕ್ಕಳಿಗೆ ಹಾಗೂ ಹಿರಿಯರಿಗೆ ಸ್ಪರ್ಧೆ ಆಯೋಜಿಸಿದ್ದೇವೆ. ಉಡುಪು, ನೃತ್ಯ, ಗ್ರೂಪ್ ಡ್ಯಾನ್ಸ್ ಎಂಬ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.