ಕರೊನಾದಿಂದ ಮೃತಪಟ್ಟವರೇ ಬೇರೆ ಶವಸಂಸ್ಕಾರಕ್ಕೆ ತಂದ ದೇಹವೇ ಬೇರೆ: ಉಡುಪಿಯಲ್ಲಿ ವಿಚಿತ್ರ ಘಟನೆ!

Corona
Published on

ಕುಂದಾಪುರ: ನೇರಂಬಳ್ಳಿ ವಯೋವೃದ್ಧರು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಕರೊನಾದಿಂದ ಮೃತಪಟ್ಟಿದ್ದು, ಕುಂದಾಪುರ ಹಳೆಕೋಟೆ ಸ್ಮಶಾನದಲ್ಲಿ ಪ್ಯಾಕ್ ಮಾಡಿದ ಬಾಡಿ ಬಿಡಿಸಿದಾಗ ಬೇರೊಬ್ಬರ ಶವ ನೋಡಿ ಕುಟುಂಬಸ್ಥರು ಕಂಗಾಲಾದ ಘಟನೆ ನಡೆದಿದೆ.

ನೇರಂಬಳ್ಳಿ ಮೂಲಕ 65 ವರ್ಷದ ವೃದ್ಧರು ಕರೊನಾ ಸೋಂಕಿನಿಂದಾಗಿ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶವವನ್ನು ಅಂಬುಲೆನ್ಸ್​ನಲ್ಲಿ ಕುಂದಾಪುರಕ್ಕೆ ತರಲಾಗಿತ್ತು.

ಶವ ಪ್ಯಾಕ್ ಮಾಡಿದ್ದರಿಂದ ಒಳಗಿರುವ ಶವ ಯಾರದ್ದೆಂದು ಸಂಬಂಧಿಕರಿಗೆ ತಿಳಿಯಲಿಲ್ಲ. ಹಳೆಕೋಟೆ ಸ್ಮಶಾನಕ್ಕೆ ಅಂತ್ಯ ಸಂಸ್ಕಾರಕ್ಕೆ ತಂದಾಗ ಶವ ಸುತ್ತಿದ ಪ್ಯಾಕ್ ಬಿಡಿಸಿದಾಗ ವಯೋವೃದ್ಧರ ಶವದ ಬದಲು ಯುವಕನ ಶವ ಇತ್ತು.

ಇದರಿಂದ‌ ಕುಪಿತರಾದ ಜನ ಆಂಲುಲೆನ್ಸ್ ಚಾಲಕನ ತರಾಟೆಗೆ ತೆಗೆದುಕೊಂಡಿದ್ದಾರೆ. ಜನ ಸ್ಮಾಶನದಲ್ಲಿ ಸೇರಿ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net