ಉಡುಪಿಯಲ್ಲಿ ನಾಲ್ವರು ಮೃತ್ಯು, 4 ಸಾವಿರ ದಾಟಿದ ಸೋಂಕಿತರು

corona
Published on

ಉಡುಪಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 4 ಸಾವಿರ ಗಡಿ ದಾಟಿದ್ದು, ಗುರುವಾರ 248 ಪಾಸಿಟಿವ್ ಪ್ರಕರಣ ದೃಢವಾಗಿದೆ.

ಆರು ದಿನಗಳಲ್ಲೇ ಜಿಲ್ಲೆಯಲ್ಲಿ ಕರೊನಾ ಪೀಡಿತರ ಸಂಖ್ಯೆ ಒಂದು ಸಾವಿರ ದಾಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4143ಕ್ಕೆ ಏರಿಕೆಯಾಗಿದೆ. ಪ್ರಸಕ್ತ 1669 ಸಕ್ರಿಯ ಪ್ರಕರಣಗಳಿವೆ.

60 ವರ್ಷ ಮೇಲ್ಪಟ್ಟ ಮೂವರು ವೃದ್ಧೆಯರು ಮತ್ತು ಓರ್ವ ವೃದ್ಧ ಸೇರಿ 4 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇವರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು.

ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಗುರುವಾರ ಉಡುಪಿ 80, ಕುಂದಾಪುರ 120, ಕಾರ್ಕಳದ 48 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಇದರಲ್ಲಿ 144 ಪುರುಷ, 104 ಮಹಿಳೆಯರು. ಒಟ್ಟು ಸೋಂಕಿತರಲ್ಲಿ 2445 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇವರಲ್ಲಿ ಗುರುವಾರದ ಸಂಖ್ಯೆ 64.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net