ಉಡುಪಿ 22 ಮಂದಿಗೆ ಕರೊನಾ

corona
Published on

ಉಡುಪಿ: ಜಿಲ್ಲೆಯಲ್ಲಿ ಗುರುವಾರ 22 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, 843 ವರದಿ ನೆಗೆಟಿವ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1443ಕ್ಕೆ ಏರಿಕೆಯಾಗಿದೆ.

10 ಪುರುಷರು, 11 ಮಹಿಳೆಯರು, ಒಂದು ಹೆಣ್ಣು ಮಗುವಿಗೆ ಪಾಸಿಟಿವ್ ಬಂದಿದೆ. ಚಿಕ್ಕಮಗಳೂರಿಗೆ ತೆರಳಿದ್ದ ಒಬ್ಬ, ದಕ್ಷಿಣ ಕನ್ನಡ 5, ಬೆಂಗಳೂರಿಗೆ ತೆರಳಿ ಆಗಮಿಸಿದ್ದ 6 ಮಂದಿಗೆ ಹಾಗೂ ಪಾಸಿಟಿವ್ ವ್ಯಕ್ತಿಗಳ ಸಂಪರ್ಕದಿಂದ 9 ಮಂದಿಗೆ ಸೋಂಕು ತಗುಲಿದೆ.

ಹಾರಾಷ್ಟ್ರದಿಂದ ಆಗಮಿಸಿದ ಒಬ್ಬರಿಗೆ ಪಾಸಿಟಿವ್ ಬಂದಿದೆ. 5 ಮಂದಿ ಉಡುಪಿ, 10 ಮಂದಿ ಕುಂದಾಪುರ, 7 ಮಂದಿ ಕಾರ್ಕಳ ತಾಲೂಕು ನಿವಾಸಿಗಳಾಗಿದ್ದಾರೆ. ಗುರುವಾರ 28 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಕೋವಿಡ್ ಶಂಕಿತ 218 ಮಂದಿಯ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 2433 ವರದಿ ನಿರೀಕ್ಷಿಸಲಾಗುತ್ತಿದೆ. ಇಲ್ಲಿವರೆಗೆ 1217 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 223 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net