

ಉಡುಪಿ: ಉಡುಪಿ ನಗರಸಭೆಯನ್ನು ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಅಗತ್ಯವಿರುವ ಮಾನದಂಡಗಳೊಂದಿಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಕಾರ್ಯದರ್ಶಿ ಮೋಹನ್ ದಾಸ್ ಹೆಗ್ಡೆ ಅವರು ಉಡುಪಿ ನಗರಸಭೆಯು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಅಗತ್ಯವಿರುವ ಮಾನದಂಡಗಳನ್ನು ಹೊಂದಿದ್ದು, ಅಗತ್ಯ ಜನಸಂಖ್ಯೆಯನ್ನು ಸಹ ಹೊಂದಿದ್ದು, ಪಟ್ಟಣವು ವಿಸ್ತರಣೆಗೊಂಡಿರುವುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ಉಡುಪಿ ಮಹಾನಗರ ಪಾಲಿಕೆಯಾಗಿ ಮೇಲ್ದಜೇಕರಿಸಲು ಕ್ರಮ ಕೈಗೊಳ್ಳಬೇಕೆಂದು ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಮನವಿ ಸಲ್ಲಿಸಿದ್ದು, ಸಚಿವರು ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಮಹಾನಗರ ಪಾಲಿಕೆಗೆ ಅರ್ಹ
ನಗರಸಭಾ ವ್ಯಾಪ್ತಿಯಲ್ಲಿ ಪ್ರಸ್ತುತ 2.25 ಲಕ್ಷ ಜನಸಂಖ್ಯೆಯಿದ್ದು, ಸುತ್ತಮುತ್ತಲಿನ ಹಿರಿಯಡ್ಕ, ಆತ್ರಾಡಿ, ಸಂತೆಕಟ್ಟೆ, ಕಲ್ಯಾಣಪುರ, ಅಂಬಲಪಾಡಿ, ತೆಂಕನಿಡಿಯೂರು, ಕಡೆಕಾರ್, ಉದ್ಯಾವರ, ಕಟಪಾಡಿ ಗ್ರಾಪಂಗಳನ್ನು ಸೇರಿಕೊಂಡರೆ ಒಟ್ಟು ಜನಸಂಖ್ಯೆ 3.85 ಲಕ್ಷ ದಾಟುತ್ತದೆ. ಈಗಾಗಲೇ ಇದೇ ಮಾದರಿಯಲ್ಲಿ ಹಾಸನ ಮತ್ತು ರಾಯಚೂರು ನಗರಸಭೆಯನ್ನು ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಹೀಗಾಗಿ ಉಡುಪಿಯೂ ಮಹಾನಗರಪಾಲಿಕೆಯಾಗಲು ಅರ್ಹವಾಗಿದೆ.
ಏನೆಲ್ಲಾ ಅನುಕೂಲಗಳು?
ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವುದರಿಂದ ಉನ್ನತ ದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸಬಹುದು. ಆರ್ಥಿಕ ಬೆಳವಣಿಗೆ, ಪ್ರವಾಸೋದ್ಯಮ ಬೆಳವಣಿಗೆ, ಆದಾಯದಲ್ಲಿ ಹೆಚ್ಚಳ, ಕೈಗಾರಿಕಾ ಪ್ರಗತಿ, ಉತ್ತಮ ಆಡಳಿತ ನಿರ್ವಹಣೆ ಸಾಧ್ಯವಾಗಲಿದೆ.
ಉಡುಪಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು, ವಾಸ್ತವಾಂಶಗಳ ಸಹಿತ ವರದಿ ನೀಡುವಂತೆ ಸರ್ಕಾರದಿಂದ ಸೂಚನೆ ಬಂದಿದೆ. ನಗರಸಭೆಗೆ ಹೊಂದಿಕೊಂಡಿರುವ ಸುತ್ತಮುತ್ತಲಿನ ಗ್ರಾಪಂಗಳನ್ನು ಸೇರಿಕೊಂಡರೆ ಜನಸಂಖ್ಯೆ 3 ಲಕ್ಷ ದಾಟಲಿದೆ. ವಾರ್ಡ್ಗಳನ್ನು ರೂಪಿಸುವ ನಿಟ್ಟಿನಲ್ಲಿ ಸಮಗ್ರ ನೆ ಹಾಗೂ ಸೂಕ್ತ ಶಿಾರಸ್ಸಿನೊಂದಿಗೆ ಶ್ರೀದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು. ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ