ಉಡುಪಿ ನಗರಸಭೆ ಜನಸಂಘದ ಆಡಳಿತಕ್ಕೆ ಮೋದಿ ಪ್ರಶಂಸೆ

udp-20-modi 1
Published on

ಉಡುಪಿ: ಗುಜರಾತಿನಲ್ಲಿ ನಡೆಯುತ್ತಿರುವ ಬಿಜೆಪಿ ಆಡಳಿತದ ಮೇಯರ್ ಮತ್ತು ಉಪಮೇಯರ್ ಸಮ್ಮೇಳನದಲ್ಲಿ ಉಡುಪಿ ನಗರಸಭೆಯ ಜನಸಂಘದ ಆಡಳಿತವನ್ನು ಉಲ್ಲೇಖಿಸಿದ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

1960ರ ದಶಕದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಉಡುಪಿ ಪುರಸಭೆಯಲ್ಲಿ ಜನಸಂಘ ಆಡಳಿತ ವಹಿಸಿತ್ತು. ಉತ್ತಮ ಯೋಜನೆಗಳಿಂದ ಜನಸಂಘ ಆಡಳಿತದ ಪುರಸಭೆ ದೇಶದಲ್ಲೇ ನಿರಂತರವಾಗಿ ಪ್ರಥಮ ಸ್ಥಾನ ಪಡೆದು ಜನ ಮೆಚ್ಚುಗೆ ಗಳಿಸಿತ್ತು. ಅಲ್ಲಿಂದ ಇಲ್ಲಿವರೆಗೂ ಜನತೆ ಮತ್ತೆ ಮತ್ತೆ ಪಕ್ಷವನ್ನು ಆರಿಸುತ್ತಿದ್ದಾರೆ. ಅದು ಪಕ್ಷದ ಮೇಲೆ ನಗರದ ಜನ ಇಟ್ಟಿರುವ ವಿಶ್ವಾಸ ಎಂದು ಬಣ್ಣಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net