ಚಂಡೀಗಢಕ್ಕೆ ಉಡುಪಿ ನಗರಸಭೆ ಸದಸ್ಯರಿಂದ ಅಧ್ಯಯನ ಪ್ರವಾಸ

udp-14-cmc
Published on

ಉಡುಪಿ: ನಗರಸಭೆಯ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿ 28 ಮಂದಿ ಸದಸ್ಯರು ಹಾಗೂ 5 ಮಂದಿ ಅಧಿಕಾರಿಗಳು ಸೆ.15ರಂದು ಚಂಡೀಗಢ ಹಾಗೂ ಅಮೃತಸರಕ್ಕೆ ಅಧ್ಯಯನ ಪ್ರವಾಸಕೈಗೊಳ್ಳಲಿದ್ದಾರೆ.

ಎರಡು ಮಹಾನಗರಪಾಲಿಕೆಯ ವಿವಿಧ ವಾರ್ಡ್‌ಗಳು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಲಿರುವ ಸದಸ್ಯರು, ಘನತ್ಯಾಜ್ಯ ನಿರ್ವಹಣೆ, ಶುಚಿತ್ವ, ಖಾತಾ ಬದಲಾವಣೆ, ಸಿಟಿಪ್ಲಾನಿಂಗ್ ಬಗ್ಗೆ 5 ದಿನ ಅಧ್ಯಯನ ನಡೆಸಲಿದ್ದಾರೆ. ಸೆ.19ರಂದು ಉಡುಪಿಗೆ ವಾಪಾಸು ಬರಲಿದ್ದಾರೆ.

ಕಾಂಗ್ರೆಸ್ ಸದಸ್ಯರು ಗೈರು
ಅಧ್ಯಯನ ಪ್ರವಾಸಕ್ಕೆ ಆಡಳಿತ ಪಕ್ಷದ ಮೂರು ಮಂದಿ ಸದಸ್ಯರಾದ ಮಾನಸಿ ಪೈ, ಗೀತಾ ಶೇಟ್, ರಶ್ಮಿ ಭಟ್ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರಾದ ರಮೇಶ್ ಕಾಂಚನ್, ಅಮೃತ ಕೃಷ್ಣಮೂರ್ತಿ, ಸೆಲಿನ ಕರ್ಕಡ, ವಿಜಯಪೂಜಾರಿ ಗೈರಾಗಲಿದ್ದಾರೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net