ಉಡುಪಿಗೆ ಸಿಜಿಎಚ್​ಎಸ್​ ಸೆಂಟರ್ ಮಂಜೂರು​: ಸಚಿವೆ ಶೋಭಾ

MP shobha
Published on

ಉಡುಪಿ: ಭಾರತ ಸರ್ಕಾರದ ನಿವೃತ್ತ ನೌಕರರ ಬಹುದಿನದ ಬೇಡಿಕೆಯಾದ ಸೆಂಟ್ರಲ್​ ಗವರ್ನ್​ಮೆಂಟ್​ ಹೆಲ್ತ್​ ಸ್ಕೀಮ್​ (ಸಿಜಿಎಚ್​ಎಸ್​) ವೆಲ್ನೆಸ್​ ಸೆಂಟರನ್ನು ಉಡುಪಿಯಲ್ಲಿ ತೆರೆಯಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಆಹಾರ ಸಂಸ್ಕರಣಾ ಉದ್ಯಮಗಳ ರಾಜ್ಯಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

2023ರ ಫೆಬ್ರವರಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್​ಸುಖ್​ ಮಾಂಡವಿಯಾ ಅವರನ್ನು ಭೇಟಿಯಾಗಿ ಸೆಂಟರ್​ ತೆರೆಯಲು ಮನವಿ ಮಾಡಲಾಗಿತ್ತು. ಇದೀಗ ಕೇಂದ್ರ ಸಚಿವರು ಉಡುಪಿ ಸೇರಿದಂತೆ ದೇಶದ 20 ನಗರಗಳಲ್ಲಿ ವೆಲ್ನೆಸ್​ ಸೆಂಟರ್​ ತೆರೆಯುತ್ತಿರುವುದಾಗಿ ಪತ್ರ ಮೂಲಕ ತಿಳಿಸಿದ್ದಾರೆ. ಉಡುಪಿ ಹಾಗೂ ನೆರೆಯ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ 46ಕ್ಕೂ ಅಧಿಕ ಇಲಾಖೆಗಳ 4,500ಕ್ಕೂ ಹೆಚ್ಚು ಉದ್ಯೋಗಿಗಳು, 9 ಸಾವಿರಕ್ಕೂ ಅಧಿಕ ನಿವೃತ್ತ ಉದ್ಯೋಗಿಗಳಿದ್ದಾರೆ. ಉಡುಪಿಯಲ್ಲಿ ಸಿಜಿಎಚ್​ಎಸ್​ ವೆಲ್ನೆಸ್​ ಸೆಂಟರ್​ ಪ್ರಾರಂಭಿಸುವುದರಿಂದ ಇವರಿಗೆಲ್ಲ ಅಗತ್ಯ ವೈದ್ಯಕಿಯ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಎಂದು ಶೋಭಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net