ಬಂಟರ ಸಂಘ ಉಡುಪಿ ಅಧಿವೇಶನ

Udupi bunts sanga
Published on

ಉಡುಪಿ:ಅಶಕ್ತರನ್ನು ಗುರುತಿಸಿ ಸಹಾಯ ಮಾಡುವ ಮನೋಭಾವ ಹೆಚ್ಚಾಗಬೇಕಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ್ ಆಳ್ವ ಅಭಿಪ್ರಾಯಪಟ್ಟರು. ಅಮ್ಮಣ್ಣಿ ರಾಮಣ್ಣ ಸಭಾ ಭವನದಲ್ಲಿ ಭಾನುವಾರ ಜರುಗಿದ ಬಂಟರ ಸಂಘ ಉಡುಪಿ ವಾರ್ಷಿಕ ಅಧಿವೇಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಸ್ವಾತಂತ್ರೃ ಸಿಕ್ಕಿ ಏಳು ದಶಕ ಕಳೆದರೂ ಬಡವರು -ಶ್ರೀಮಂತರು, ಅಕ್ಷರಸ್ಥರು-ಅನಕ್ಷರಸ್ಥರ ನಡುವೆ ದೊಡ್ಡಮಟ್ಟದ ಅಂತರ ಸೃಷ್ಟಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆರ್ಥಿಕವಾಗಿ ಸದೃಢರಿಲ್ಲದವರು ಶಿಕ್ಷಣ ಪಡೆಯಲು ಕಷ್ಟ ಪಡುತ್ತಿರುವ ಕುಟುಂಬಗಳು ನಮ್ಮಲ್ಲಿವೆ. ಬಂಟ ಸಮಾಜ ಸೇರಿದಂತೆ, ಎಲ್ಲ ವರ್ಗಗಳಿಗೆ ಆರ್ಥಿಕ ಮತ್ತು ಶಿಕ್ಷಣ ಸಂಬಂಧಿಸಿ ಸಹಕಾರ ನೀಡುವ ಕಾರ್ಯ ನಮ್ಮಿಂದ ಹೆಚ್ಚಾಗಬೇಕಿದೆ ಎಂದರು.

ಎಂಆರ್‌ಜಿ ಗ್ರೂಪ್ಸ್ ಚೇರ್ಮನ್ ಕೆ.ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಬಂಟರ ಸಂಘದ ಅಧ್ಯಕ್ಷ ಪುರುಷೊತ್ತಮ ಪಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಂಗಳೂರು ಎಂಆರ್‌ಪಿಎಲ್ ಸಿಎಸ್‌ಆರ್ ಚೀಫ್ ಮ್ಯಾನೇಜರ್ ವೀಣಾ ಟಿ. ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಂಟರ ತಾಲೂಕು ಸಮಿತಿ ಸಂಚಾಲಕ ಜಯರಾಜ್ ಹೆಗ್ಡೆ, ಉದ್ಯಮಿಗಳಾದ ಗುರ್ಮೆ ಸುರೇಶ್ ಶೆಟ್ಟಿ, ಸಾಯಿರಾಧಾ ಸಂಸ್ಥೆಯ ಮನೋಹರ್ ಶೆಟ್ಟಿ, ಉದ್ಯಮಿ, ನಟ ರೋಹಿತ್ ಕಟೀಲು, ಪುಣೆ ಬಂಟರ ಸಂಘದ ಮುಖ್ಯಸ್ಥ ಪ್ರವೀಣ್ ಶೆಟ್ಟಿ, ಮಹಿಳಾ ಬಂಟರ ಸಂಘದ ವೀಣಾ ಶೆಟ್ಟಿ, ಶ್ವೇತಾ ಜಯಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಮಿತ್ ಕುಮಾರ್ ಶೆಟ್ಟಿ ಕೆ. ಉಪಸ್ಥಿತರಿದ್ದರು. ಸಂಘದ ಗೌರವಾಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಕಾರ್ಯಕ್ರಮದಲ್ಲಿ ಡಾ.ಮೋಹನ್ ಆಳ್ವ, ಯೋಗಪಟು ತನುಶ್ರೀ ಪಿತ್ರೋಡಿ, ಕೆ.ಪ್ರಕಾಶ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net