ಉಡುಪಿ : ವಿಜಯ ಸಂಕಲ್ಪ ಯಾತ್ರೆ, ಪ್ರಗತಿ ರಥ ಯಾತ್ರೆ ಹಾಗೂ ಮೋರ್ಚಾಗಳ ಜಿಲ್ಲಾ ಸಮಾವೇಶಕ್ಕೆ ಜಿಲ್ಲಾ ಬಿಜೆಪಿ ಸಜ್ಜಾಗಿದ್ದು, ಮಾ.13ರಿಂದ 15ರ ವರೆಗೆ ಉಡುಪಿ ಜಿಲ್ಲೆಯಾದ್ಯಂತ ’ವಿಜಯ ಸಂಕಲ್ಪ ಯಾತ್ರೆ ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.13ರಂದು ಮಧ್ಯಾಹ್ನ 3.30ಕ್ಕೆ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಯಾತ್ರೆ ಆಗಮನ, ಹೆಬ್ರಿಯಲ್ಲಿ ರೋಡ್ ಶೋ, ಸಾಯಂಕಾಲ 5.30ಕ್ಕೆ ಸಾರ್ವಜನಿಕ ಸಭೆ, ಮಾ.14ರಂದು ಬೆಳಿಗ್ಗೆ 9ಕ್ಕೆ ಕಾಪು ವಿಧಾನಸಭಾ ಕ್ಷೇತ್ರದ ಪೆರ್ಡೂರು-ಪಾಡಿಗಾರದಲ್ಲಿ ಸ್ವಾಗತ, ಸುಮಾರು 2,000 ಬೈಕ್‌ಗಳ ಜಾಥಾ ನಡೆಯಲಿದೆ. ಮಾ.14ರಂದು ಮಧ್ಯಾಹ್ನ 11ಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ ಪರ್ಕಳಕ್ಕೆ ಆಗಮನ, ಸುಮಾರು 2,000 ಬೈಕ್ ಗಳ ಜಾಥಾ, ಸಾಯಂಕಾಲ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಾರ್ಕೂರು ಬಳಿ ಸ್ವಾಗತ, 5.30ಕ್ಕೆ ಸಾರ್ವಜನಿಕ ಸಭೆ, ಮಾ.15 ರಂದು ಬೆಳಿಗ್ಗೆ 9ಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮನ, ಸಿದ್ದಾಪುರದಲ್ಲಿ ಸಾರ್ವಜನಿಕ ಸಭೆ ನಡೆಉಲಿದೆ. ಬಳಿಕ ಶೃಂಗೇರಿಗೆ ರಥಯಾತ್ರೆ ತೆರಳಲಿದೆ ಎಂದು ತಿಳಿಸಿದರು.
ವಿವಿಧೆಡೆ ಸಮಾವೇಶ
ಮಾ.10ರಂದು ಬೆಳಿಗ್ಗೆ 10 ಗಂಟೆಗೆ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಟಪಾಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಫಲಾನುಭವಿಗಳ ಜಿಲ್ಲಾ ಮಟ್ಟದ ಬೃಹತ್ ಸಮಾವೇಶವು ರಾಜ್ಯ ಸರ್ಕಾರ ವತಿಯಿಂದ ನಡೆಯಲಿದೆ. ಮಾ.12ರಂದು ಬೆಳಗ್ಗೆ 10ಕ್ಕೆ ಕುಂದಾಪುರದ ನೆಹರೂ ಮೈದಾನದಲ್ಲಿ ಜಿಲ್ಲಾ ಮಹಿಳಾ ಸಮಾವೇಶ ನಡೆಯಲಿದೆ. ಮಾ.14ರಂದು ಬೈಂದೂರಿನಲ್ಲಿ ಜಿಲ್ಲಾ ಮಟ್ಟದ ಎಸ್ಸಿ ಮತ್ತು ಎಸ್ಟಿ ಸಮಾವೇಶ, ಮಾ.15ರಂದು ಬೆಳಿಗ್ಗೆ 10ಕ್ಕೆ ಬ್ರಹ್ಮಾವರದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಸಮಾವೇಶ ಹಾಗೂ ಮಾ.19ರಂದು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ರೈತ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಪ್ರಗತಿ ರಥ ಯಾತ್ರೆಯ ಜಿಲ್ಲಾ ಸಂಚಾಲಕ ಶರತ್ ಶೆಟ್ಟಿ ಉಪ್ಪುಂದ ಹಾಗೂ ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿಯ ಜಿಲ್ಲಾ ಸಂಚಾಲಕ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.