ಬಸ್ ಮಾಲೀಕನ ಕೊಲೆ ಯತ್ನ ಪ್ರಕರಣ, ಮಹಿಳೆ ಸಹಿತ 9 ಆರೋಪಿಗಳ ಸೆರೆ

arrest
Published on

ಉಡುಪಿ: ಮಲ್ಪೆ ಕೊಡವೂರಿನ ನಿವಾಸಿ ಎಕೆಎಂಎಸ್ ಬಸ್ ಮಾಲೀಕ ಸೈಪುದ್ದೀನ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳದ ಖಾಸಗಿ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ ಓರ್ವ ಮಹಿಳೆ ಸೇರಿ 9 ಮಂದಿ ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ವಿರಾಜಪೇಟೆಯ ದರ್ಶನ್ ದೇವಯ್ಯ, ಆತನ ಪತ್ನಿ ಸೌಭಾಗ್ಯ, ಸೋಮವಾರ ಪೇಟೆಯ ಅನಿಲ್ ಕುಮಾರ್, ಮೂಡುಬಿದಿರೆಯ ಸಂತೋಷ್, ಗೋಪಾಲ್, ಬೆಳ್ತಂಗಡಿಯ ಸುಕೇಶ್ ಪೂಜಾರಿ, ಮೋಹನ, ಕೆ.ಆರ್.ನಗರದ ಸೋಮು, ಪಿರಿಯಾಪಟ್ಟಣದ ಮಹೇಶ್ ಬಾಬು ಬಂಧಿತರು. ಬುಧವಾರ ಸೈಪುದ್ದೀನ್ ಲಕ್ಷ್ಮೀಂದ್ರನಗರದಲ್ಲಿನ ಕಚೇರಿಯಲ್ಲಿದ್ದಾಗ ಐವರು ಆರೋಪಿಗಳು ಮಾರಕಾಯುಧಗಳೊಂದಿಗೆ ನುಗ್ಗಿ ಹತ್ಯೆ ಮಾಡಲು ವಿಫಲ ಯತ್ನ ನಡೆಸಿ ಡಸ್ಟರ್ ಕಾರಿನಲ್ಲಿ ಪರಾರಿಯಾಗಿದ್ದರು. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net