ಹೇಗಿದೆ ನೋಡಿ ಸರ್ಜಾ ಕುಟುಂಬ ನಿರ್ಮಿಸಿದ ರಾಮಾಂಜನೇಯ ದೇವಸ್ಥಾನ!

1130748
Published on

ಉಡುಪಿ: ನಟ ಅರ್ಜುನ್ ಸರ್ಜಾ ತಮಿಳುನಾಡಿನ ಚೆನ್ನೈನಲ್ಲಿ ಶ್ರೀರಾಮ ಮತ್ತು ಆಂಜನೇಯನ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದು, ಎರಡು ದಿನಗಳಿಂದ ನಡೆಯುತ್ತಿರುವ ದೇಗುಲದ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಪ್ರಕ್ರಿಯೆಯಲ್ಲಿ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾಗಿದ್ದಾರೆ.

ಅಯೋಧ್ಯೆ ಪ್ರವಾಸದಲ್ಲಿದ್ದ ಪೇಜಾವರ ಶ್ರೀಗಳನ್ನು ಅರ್ಜುನ್ ಸರ್ಜಾ ತಮಿಳುನಾಡಿಗೆ ಕರೆಸಿ ದೇವರಿಗೆ ಕುಂಬಾಭಿಷೇಕ ಮಾಡಿಸಿದ್ದಾರೆ. ಎರಡು ದಿನಗಳ ಕಾಲ ನಡೆದ ಧಾರ್ಮಿಕ ವಿಧಿ-ವಿಧಾನದಲ್ಲಿ ಅವಧೂತ ವಿನಯ್ ಗುರೂಜಿ ಕೂಡ ಪಾಲ್ಗೊಂಡಿದ್ದರು.

ಪೇಜಾವರ ಸ್ವಾಮೀಜಿ ಭಗವಾನ್ ಆಂಜನೇಯ ದೇವರ ಬೃಹತ್ ವಿಗ್ರಹಕ್ಕೆ ಜೇನು, ತುಪ್ಪ ಸಕ್ಕರೆಯ, ಅಭಿಷೇಕವನ್ನು ಮಾಡಿಸಿ, ಪ್ರಾರ್ಥನೆ ಜೊತೆ ಹೂವಿನ ಪಕಳಗಳ ಅಭಿಷೇಕಗೈದರು. ಚೆನ್ನೈನಲ್ಲಿ ಪೇಜಾವರ ಮಠದ ಶಾಖೆ ಇದೆ. ಸರ್ಜಾ ಕುಟುಂಬ ವಿಶ್ವೇಶತೀರ್ಥರ ಕಾಲದಿಂದಲೂ ಪೇಜಾವರ ಮಠದ ಜೊತೆ ಸಂಬಂಧ ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net