ಉಡುಪಿಯಲ್ಲಿ 245 ಮಂದಿ ಪಾಸಿಟಿವ್

Published on

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ 245 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಉಡುಪಿಯ 125, ಕುಂದಾಪುರದ 92, ಕಾರ್ಕಳದ 25 ಮಂದಿ, ಹೊರ ಜಿಲ್ಲೆಯ ಮೂವರು ಸೋಂಕಿತರು. ವಿವಿಧ ಆರೋಗ್ಯ ಸಮಸ್ಯೆ ಹೊಂದಿದ್ದ ಉಡುಪಿ ತಾಲೂಕಿನ 78 ವರ್ಷದ ಮಹಿಳೆ ಮೃತಪಟ್ಟಿದ್ದು, ಇವರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5605ಕ್ಕೆ, ಮೃತರ ಸಂಖ್ಯೆ 55ಕ್ಕೆ ಏರಿದೆ. ಹೋಂ ಮತ್ತು ಆಸ್ಪತ್ರೆ ಐಸೋಲೇಶನ್‌ನಿಂದ 101 ಮಂದಿ ಗುಣವಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 3258 ಮಂದಿ ಸೋಂಕುಮುಕ್ತರಾಗಿದ್ದಾರೆ.

ಕೋವಿಡ್-19 ರ‌್ಯಾಂಡಮ್ ಪರೀಕ್ಷೆ ವ್ಯವಸ್ಥೆ ಚುರುಕುಗೊಂಡಿದ್ದು ಶುಕ್ರವಾರ 1357 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗಿದೆ. 1148 ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನೂ 1203 ಮಂದಿಯ ವರದಿ ನಿರೀಕ್ಷೆಯಿದೆ. 2292 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಸಕ ಲಾಲಾಜಿ ಹೋಂ ಕ್ವಾರಂಟೈನ್: ಪಡುಬಿದ್ರಿ: ಕಾರ್ಯದರ್ಶಿಗೆ ಕೋವಿಡ್-19 ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಶುಕ್ರವಾರ ಕಂದಾಯ ಸಚಿವ ಆರ್.ಅಶೋಕ್ ಜಿಲ್ಲೆಯ ಪಡುಬಿದ್ರಿ, ಕಾಪು ಭೇಟಿ ಸಂದರ್ಭ ಮೆಂಡನ್ ಗೈರಾಗಿದ್ದರು. ವಿಚಾರಿಸಿದಾಗ ಶಾಸಕರು ಹೋಂ ಕ್ವಾರಂಟೈನ್‌ನಲ್ಲಿ ಇರುವುದು ಗೊತ್ತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net