

ಮಂಗಳೂರು: 2020-21ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ರಾಜ್ಯದಲ್ಲಿ 157 ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಗಳಿಸಿದ್ದಾರೆ.
ಉಡುಪಿ ಜಿಲ್ಲೆಯ 11 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 9 ವಿದ್ಯಾರ್ಥಿಗಳು ಪೂರ್ಣಾಂಕ ಪಡೆದಿದ್ದಾರೆ. ಈ ಪೈಕಿ ದಕ್ಷಿಣ ಕನ್ನಡದಿಂದ ಓರ್ವ ಹಾಗೂ ಉಡುಪಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದಿದವರು. ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಗಣೇಶ್ ಹನುಮಂತಪ್ಪ, ಕೋಟ ವಿವೇಕ ಜೂನಿಯರ್ ಕಾಲೇಜಿನ ಶ್ರೀನಿಧಿ ಹಾಗೂ ಗಂಗೊಳ್ಳಿ ಸ್ಟೆಲ್ಲಾ ಮೇರಿಸ್ ಹೈಸ್ಕೂಲಿನ ಶ್ರೇಯಾ ಈ ಸಾಧಕ ವಿದ್ಯಾರ್ಥಿಗಳು. ಇತರ ಎಲ್ಲ 17 ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ಓದಿದವರು.
ದಕ್ಷಿಣ ಕನ್ನಡದ ವಿದ್ಯಾರ್ಥಿಗಳು:
1. ಅನನ್ಯಾ ಎಂ.ಡಿ., ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸುಬ್ರಹ್ಮಣ್ಯ
2. ಗಣೇಶ್ ಹನಮಂತಪ್ಪ ವೀರಪುರ್, ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ, ಮೂಡುಬಿದಿರೆ
3. ಕೀರ್ತನ ಶೆಣೈ, ಕೆನರಾ ಹೈಸ್ಕೂಲ್, ಉರ್ವ, ಮಂಗಳೂರು (ಆಂಗ್ಲ ಮಾಧ್ಯಮ)
4. ಸಂಯುಕ್ತಾ ಪ್ರಭು, ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಲಾಯಿಲ, ಬೆಳ್ತಂಗಡಿ
5. ಎನ್. ಪ್ರತೀಕ್ ಮಲ್ಯ, ಎಸ್‌ವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬಂಟ್ವಾಳ
6. ರಿತಿಕಾ, ಸೇಂಟ್ ಜೆರೊಸಾ ಬಾಲಕಿಯರ ಪ್ರೌಢಶಾಲೆ, ಜೆಪ್ಪು, ಮಂಗಳೂರು
7. ಶ್ರೀಶ ಶರ್ಮಾ ಕೆ., ಸೇಂಟ್ ಜಾರ್ಜ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ನೆಲ್ಯಾಡಿ
8. ತನಿಶಾ ರೈ, ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪಾಂಗ್ಲಾಯಿ ದರ್ಬೆ, ಪುತ್ತೂರು
9. ವೆನಿಸ್ಸಾ ಶರಿನಾ ಡಿಸೋಜ, ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸುಬ್ರಹ್ಮಣ್ಯ
ಉಡುಪಿ ವಿದ್ಯಾರ್ಥಿಗಳು:
1. ಅಭಿಷೇಕ್ ಜಯಂತ್ ಹೊಳ್ಳ, ಸರ್ಕಾರಿ ಹೈಸ್ಕೂಲ್, ವಳಕಾಡು (ಆಂಗ್ಲ ಮಾಧ್ಯಮ)
2. ಅನುಶ್ರೀ ಶೆಟ್ಟಿ, ವಿ.ಕೆ.ಆರ್. ಆಚಾರ್ಯ ಮೆಮೊರಿಯಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕುಂದಾಪುರ
3. ಅನುಶ್ರೀ ಶೆಟ್ಟಿ, ಮದರ್ ಥೆರೆಸಾ ಮೆಮೊರಿಯಲ್ ಪ್ರೌಢ ಶಾಲೆ, ಶಂಕರನಾರಾಯಣ (ಆಂಗ್ಲ ಮಾಧ್ಯಮ)
4. ನವನೀತ್ ಎಸ್. ರಾವ್, ಟಿ.ಎ.ಪೈ ಆಂಗ್ಲ ಮಾಧ್ಯಮ ಹೈಸ್ಕೂಲ್, ಕುಂಜಿಬೆಟ್ಟು
5. ಪ್ರಣೀತಾ, ವಿ.ಕೆ.ಆರ್. ಆಚಾರ್ಯ ಮೆಮೊರಿಯಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕುಂದಾಪುರ
6. ಪ್ರತೀಕ್ಷಾ ಪೈ, ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಹೈಸ್ಕೂಲ್, ಬೈಲಕೆರೆ, ಉಡುಪಿ
7. ಸಮತಾ ಎಚ್.ಎಸ್, ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜು, ಉಡುಪಿ
8. ಸಾತ್ವಿಕ್ ಪದ್ಮನಾಭ ಭಟ್, ಶ್ರೀ ನಾರಾಯಣ ಗುರು ಆಂಗ್ಲಮಾಧ್ಯಮ ಪ್ರೌಢ ಶಾಲೆ, ಮಲ್ಪೆ
9. ಶ್ರೇಯಾ, ಸ್ಟೆಲ್ಲಾ ಮೇರಿಸ್ ಹೈಸ್ಕೂಲ್, ಗಂಗೊಳ್ಳಿ
10. ಶ್ರೀನಿಧಿ, ವಿವೇಕ ಜೂನಿಯರ್ ಕಾಲೇಜು, ಕೋಟ (ಕನ್ನಡ ಮಾಧ್ಯಮ)
11. ಸೃಜನ್ ಭಟ್ ಕೆ, ವಿ.ಕೆ.ಆರ್. ಆಚಾರ್ಯ ಮೆಮೊರಿಯಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕುಂದಾಪುರ