

ಕೋಟ: ಐವತ್ತರ ಸುವರ್ಣ ಪರ್ವ ಆಚರಿಸುತ್ತಿರುವ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ದಿ.ಕಾರ್ಕಡ ಶ್ರೀನಿವಾಸ ಉಡುಪ ಮತ್ತು ಎಚ್.ಶ್ರೀಧರ ಹಂದೆ ಅವರ ಹೆಸರಿನ 2025ರ ಸಾಲಿನ ಉಡುಪ-ಹಂದೆ ಪ್ರಶಸ್ತಿಗೆ ಯಕ್ಷಗಾನ ಭಾಗವತ ಹೆರೆಂಜಾಲು ಗೋಪಾಲ ಗಾಣಿಗ ಮತ್ತು ರಾಷ್ಟ್ರೀಯ ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್ ಆಯ್ಕೆಯಾಗಿದ್ದಾರೆ. ಕೋಟದ ಪಟೇಲರ ಮನೆಯಲ್ಲಿ ಜ.31 ಮತ್ತು ಫೆ.1ರಂದು ನಡೆಯುವ ಕಲೋತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಮಕ್ಕಳ ಮೇಳ ಕಾರ್ಯದರ್ಶಿ ಸುಜಯೀಂದ್ರ ಹಂದೆ ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.