ಉಡಿಗಾಲದಲ್ಲಿ ಆರೋಗ್ಯ ತಪಾಸಣೆ

27charan9
Published on

ಚಾಮರಾಜನಗರ: ತಾಲೂಕಿನ ಉಡಿಗಾಲ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿನ ಯೂತ್ ಸೇವಾ, ಡಾಕ್ಟರ್ಸ್‌ ಸೇವಾ, ಚನರೆ ಆಸ್ಪತ್ರೆ, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಸಂಧಿವಾತ, ಸೋರಿಯಾಸಿಸ್, ಕೀಲುನೋವು, ಬೆನ್ನುನೋವು, ಸೀರೋಗ, ಅಲರ್ಜಿ ಮತ್ತು ಬಿ.ಪಿ, ಶುಗರ್, ಇ.ಸಿ.ಜಿ. ಮೂಳೆ ಸಾಂದ್ರತೆ ಪರೀಕ್ಷೆ ಮಾಡಲಾಯಿತು.

ಚನರೆ ಆಸ್ಪತ್ರೆಯ ಸಂಧಿವಾತ ತಜ್ಞರಾದ ಡಾ.ಶ್ರುತಿ ದೇಸಾಯಿ, ಡಾ.ಚೈತ್ರಾ ನಿರಂತರ, ಇಮ್ಯುನಾಲಜಿಸ್ಟ್ ಡಾ.ಸ್ಮಿತಾ ಜೆ.ಎನ್.ಸಿಂಗ್ ರೋಗಿಗಳಿಗೆ ಚಿಕಿತ್ಸೆ ನೀಡಿದರು. ಸುಮಾರು 200ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ಪಡೆದರು. ಇದೇ ವೇಳೆ ಔಷಧವನ್ನು ವಿತರಣೆ ಮಾಡಲಾಯಿತು. ಐಎಆರ್‌ಸಿ ಟ್ರಸ್ಟ್‌ನ ಆಡಳಿತಗಾರ ಕೆ.ಟಿ.ರಾಜೇಂದ್ರ ಪ್ರಸಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಉಪಾಧ್ಯಕ್ಷೆ ಮುದ್ದಮ್ಮ, ಪಿಡಿಒ ಬಿ.ಎಸ್.ಶೋಭಾ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net