ಸುಮಂಗಲೆಯರಿಗೆ ಉಡಿ ಸೇವೆ

ಕನಕಗಿರಿ ರಾಜಬೀದಿಯಲ್ಲಿನ ಗಜಲಕ್ಷ್ಮೀ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೇ ಶುಕ್ರವಾರ ನಿಮಿತ್ತ ಸುಮಂಗಲೆಯರಿಗೆ ಉಡಿ ತುಂಬಲಾಯಿತು.
ಕನಕಗಿರಿ ರಾಜಬೀದಿಯಲ್ಲಿನ ಗಜಲಕ್ಷ್ಮೀ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೇ ಶುಕ್ರವಾರ ನಿಮಿತ್ತ ಸುಮಂಗಲೆಯರಿಗೆ ಉಡಿ ತುಂಬಲಾಯಿತು.
Published on

ಕನಕಗಿರಿ: ಶ್ರಾವಣ ಮಾಸದ ಕೊನೇ ಶುಕ್ರವಾರ ನಿಮಿತ್ತ ಪಟ್ಟಣದ ರಾಜಬೀದಿಯ ಶ್ರೀ ಗಜಲಕ್ಷ್ಮೀ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರಿಯ ಗಜಲಕ್ಷ್ಮೀ ಸೇವಾ ಸಮಿತಿಯಿಂದ ಸುಮಂಗಲೆಯರಿಗೆ ಉಡಿತುಂಬಲಾಯಿತು. ಬೆಳಗ್ಗೆ ದೇವಸ್ಥಾನದಲ್ಲಿ ಗಜಲಕ್ಷ್ಮೀ ದೇವಿಗೆ ಅಭಿಷೇಕ, ಪುಷ್ಪಾರ್ಚನೆ, ವಿಶೇಷ ಅಲಂಕಾರ ಮಾಡಲಾಗಿತ್ತು. ನಂತರ ಅನ್ನಸಂತರ್ಪಣೆ ನೆರವೇರಿತು. ಸಮಿತಿ ಅಧ್ಯಕ್ಷ ಯಮನೂರಪ್ಪ ಬೊಂದಾಡೆ, ಮಹಿಳಾ ಮಂಡಳಿ ಅಧ್ಯಕ್ಷೆ ಮಂಜುಳಾ ಬೊಂದಾಡೆ, ಸಂತರಾದ ಮೋತಿಲಾಲ್ ಹೆಬ್ಬಾರೆ, ಪ್ರಮುಖರಾದ ಅರುಣಕುಮಾರ್ ಬೊಂದಾಡೆ, ಕಿರಣಕುಮಾರ ಅಚ್ಚಲಕರ, ಶ್ರೀನಿವಾಸ ಅಚ್ಚಲಕರ, ಮಂಜುನಾಥ, ನವೀನ್ ಬೊಂದಾಡೆ, ನಾಗರಾಜ ಬೊಂದಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net