

ಕೆರೂರ : ಪಟ್ಟಣದ ಗ್ರಾಮ ದೇವತೆಯರಾದ ದ್ಯಾಮಮ್ಮ ಹಾಗೂ ದುರ್ಗಮ್ಮ ದೇವಿ ಉಡಿ ತುಂಬವ ಕಾರ್ಯಕ್ರಮ ಶುಕ್ರವಾರ ಸಂಭ್ರಮದಿಂದ ಜರುಗಿತು.
ಪಟ್ಟಣದಲ್ಲಿ ಐದು ವಾರಗಳಿಂದ ಪ್ರತಿ ಶುಕ್ರವಾರ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಕೊನೆಯ ಶುಕ್ರವಾರ ಉಡಿ ತುಂಬವ ಕಾರ್ಯಕ್ರಮ ಜರಗಿತು. ಬೆಳಗ್ಗೆ ದೇವಸ್ಥಾನದಲ್ಲಿ ಗ್ರಾಮ ದೇವತೆಗಳಿಗೆ ಪೂಜಾ ಕಾರ್ಯಗಳು ನಡೆದವು. ದೇವಸ್ಥಾನದಿಂದ ಸಕಲ ಮಂಗಲವಾಧ್ಯಗಳೊಂದಿಗೆ ಮೆರವಣಿಗೆ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು. ಪಟ್ಟಣದ ಎಲ್ಲ ಸಮುದಾಯವರು ಕೂಡಿಕೊಂಡು ದೇವಿಗೆ ವಿಶೇಷ ಪೂಜೆ, ನೈವಿಧ್ಯ ಅರ್ಪಿಸಿದರು.
ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಪ್ರತಿಷ್ಠಾಪಿಸಿರುವ ಭವ್ಯ ಮಂಟಪದಲ್ಲಿ ದೇವಿಯ ದರ್ಶನಕ್ಕೆ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿತ್ತು.