ಉದ್ಭವ ಬಸವೇಶ್ವರ ಮಹಾರಾಜ್ ಕೀ ಜೈ

11 SHOROLA
ಶಿರೋಳ ಸಮೀಪದ ಕಲ್ಲಾಪುರ ಗ್ರಾಮದ ಉದ್ಭವಬಸವಣ್ಣ ಮಹಾರಥೋತ್ಸವ ವೈಭವದಿಂದ ನಡೆಯಿತು.
Published on

ಶಿರೋಳ: ಕಲ್ಲಾಪುರ ಗ್ರಾಮದ ಉದ್ಭವಬಸವಣ್ಣ ಮಹಾರಥೊತ್ಸವ ವೈಭವದಿಂದ ಸೋಮವಾರ ನೆರವೇರಿತು.

ಬೆಳಿಗೆ 6ಗಂಟೆಗೆ ರುದ್ರಾಭಿಷೇಕ, ಮಧ್ಯಾಹ್ನ ಪ್ರಸಾದ, ಸಂಜೆ 5ಗಂಟೆಗೆ ಕರಡಿಮೇಳ, ಆರತಿ, ನಂದಿಕೋಲು ಮೆರವಣಿಗೆ ಹಾಗೂ ಹರ-ಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ಬಸವೇಶ್ವರ ಮಹಾರಾಜ್ ಕೀ ಜೈ ಎಂಬ ಘೋಷಣೆ ಕೂಗಿದರು.

ಜಾತ್ರೆಯಲ್ಲಿ ನರಗುಂದ, ರಾಮದುರ್ಗ, ಬಾದಾಮಿ, ರೋಣ, ಸವದತ್ತಿ ತಾಲೂಕಿನ ಜನತೆ ಬಂದಿದ್ದರು. ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಜೆ ಗ್ರಾಮದ ಶ್ರೀ ಬಸವೇಶ್ವರ ನಾಟ್ಯ ಸಂಘದಿಂದ ‘ವಿಷದ ಹುತ್ತಕ್ಕೆ ಹಾಲೆರೆದ ಮುತ್ತೈದೆ’ ನಾಟಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net