ಉದ್ಭವ ವ್ಯಾಪಾರ ಮೇಳ ಅ. 11, 12ರಂದು

Published on

ಹುಬ್ಬಳ್ಳಿ: ಜಿತೋ ಹುಬ್ಬಳ್ಳಿ ಚಾಪ್ಟರ್ ಫೌಂಡೇಶನ್ ವತಿಯಿಂದ ಉದ್ಭವ 2.0 ಬೃಹತ್ ವ್ಯಾಪಾರ ಮೇಳ ಅ. 11 ಮತ್ತು 12ರಂದು ನಗರದ ಕೇಶ್ವಾಪುರದ ಕುಸುಗಲ್ ರಸ್ತೆಯಲ್ಲಿರುವ ಶ್ರೀನಿವಾಸ ಗಾರ್ಡನ್​ನಲ್ಲಿ ನಡೆಯಲಿದೆ.

ವ್ಯಾಪಾರ ಮತ್ತು ಉದ್ಯೋಗ ಮೇಳಗಳು, ಪ್ರದರ್ಶನಗಳು, ಮಹಿಳಾ ಸಮಾವೇಶ, ಯುವ ಸಮಾವೇಶ, ಶೈಕ್ಷಣಿಕ ಕಾರ್ಯಕ್ರಮಗಳು, ನೇರ ಮನರಂಜನಾ ಸಂಗೀತ ಕಚೇರಿಗಳು ನಡೆಯಲಿದೆ. ಎರಡನೇ ಭಾರಿ ಇಂಥದೊಂದು ಮೇಳ ಆಯೋಜಿಸಿದ್ದೇವೆ. ಹುಬ್ಬಳ್ಳಿಯಲ್ಲಿ ಮೊದಲ ಬಾರಿ ಆಯೋಜಿಸಿದ್ದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಮೇಳೆಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ. ಈ ಮೇಳವು ಉತ್ತರ ಕರ್ನಾಟಕದ ಮೆಗಾ ಇವೆಂಟ್ ಆಗಲಿದೆ. ಯುವಕರನ್ನು ಉದ್ಯಮಶೀಲತೆ, ವ್ಯವಹಾರ ಬೆಳವಣಿಗೆ ಮತ್ತು ಸ್ವ-ಅಭಿವೃದ್ಧಿಯತ್ತ ಪ್ರೇರೇಪಿಸುವ ಗುರಿಯನ್ನು ಹೊಂದಿದೆ ಎಂದು ಜಿತೋ ಹುಬ್ಬಳ್ಳಿ ಕಾರ್ಯದರ್ಶಿ ಪ್ರವೀಣ್ ಚೌಧರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net