

ಹುಬ್ಬಳ್ಳಿ: ಇಲ್ಲಿಯ ಶ್ರೀನಿವಾಸ ಗಾರ್ಡನ್ನಲ್ಲಿ ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಜೇಶನ್ (ಜಿತೊ)ನ ಹುಬ್ಬಳ್ಳಿ ಶಾಖೆ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಉದ್ಭವ್-ಮೆಗಾ ಇವೆಂಟ್ ಮತ್ತು ಟ್ರೇಡ್ ಎಕ್ಸ್ಪೋಗೆ ಶುಕ್ರವಾರ ಚಾಲನೆ ನೀಡಲಾಯಿತು.
ಜಿತೊ ಕರ್ನಾಟಕ-ಕೇರಳ-ಗೋವಾ ವಲಯದ ಚೇರ್ಮನ್ ಅಶೋಕ ಸಲೇಚಾ, ಕಾರ್ಯದರ್ಶಿ ದಿಲೀಪ ಜೈನ್, ಜಿತೊ ಹುಬ್ಬಳ್ಳಿ ಮಹಿಳಾ ವಿಂಗ್ ಅಧ್ಯಕ್ಷೆ ಸಾಧನಾ ಜೈನ್, ಕಾರ್ಯದರ್ಶಿ ಲಲಿತಾ ಸುರಾನಾ, ಯುತ್ ವಿಂಗ್ ಚೇರ್ಮನ್ ಅರಿಹಂತ ತಲೇದಾ, ಕಾರ್ಯದರ್ಶಿ ಅಂಕಿತ ಸಂಕ್ಲೇಚಾ, ಭವರಲಾಲ ಜೈನ್, ಪ್ರವೀಣ ಚೌದರಿ, ಸಂತೋಷ ಪೋರವಲ್, ಬಾಬುಲಾಲ ಜೈನ್ ಯೇಷ್ಮಾ ಜೈನ್, ಇತರರು ಇದ್ದರು.
ಉಡಾನ್ ಎಕ್ಸ್ಪೋವನ್ನು ಮೀಠಾ ಭಾರತದ ಅರವಿಂದ ಕಲಬುರ್ಗಿ ಉದ್ಘಾಟಿಸಿದರು.
ಮೊದಲ ಅಧಿವೇಶನದಲ್ಲಿ ಮಾತನಾಡಿದ ಪ್ರಸಿದ್ಧ ಜ್ಯೋತಿಷಿ ಜೈ ಮಡಾನ, ಮನೆ, ಅಂಗಡಿ, ಇನ್ಯಾವುದೇ ನಿರ್ವಣಕ್ಕೆ ದಕ್ಷಿಣ ದಿಕ್ಕು ಉತ್ತಮವಲ್ಲ ಎಂಬ ಅಭಿಪ್ರಾಯವಿದೆ. ದಕ್ಷಿಣ ದಿಕ್ಕು ಹೆಚ್ಚು ಖರ್ಚನ್ನು ಬಯಸುತ್ತದೆ. ಒಂದಿಷ್ಟು ಖರ್ಚು ಮಾಡಿದರೆ ದಕ್ಷಿಣ ಉತ್ತಮ ದಿಕ್ಕು. ಬಹಳಷ್ಟು ನಗರಗಳ ದಕ್ಷಿಣ ಭಾಗವು ಹೆಚ್ಚು ಸಮೃದ್ಧವಾಗಿರುವುದನ್ನು ನಾವು ಕಾಣಬಹುದು ಎಂದು ಹೇಳಿದರು.
ಜಿತೊ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಪ್ರಕಾಶ ಕೊಠಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಯ ಮಹತ್ವದ ಯೋಜನೆಯಾದ ಕೇಶ್ವಾಪುರ ಅರಿಹಂತನಗರದಲ್ಲಿ ಜಿತೊ ಹುಬ್ಬಳ್ಳಿ ಗರ್ಲ್ಸ್ ಹಾಸ್ಟೆಲ್ ಆಂಡ್ ಎಜ್ಯುಕೇಶನ್ ಸೆಂಟರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.