

ಹುಬ್ಬಳ್ಳಿ: ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಜೇಶನ್ (ಜೀತೋ) ಹುಬ್ಬಳ್ಳಿ ಶಾಖೆ ವತಿಯಿಂದ ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿ ಉದ್ಭವ್ 3 ದಿನಗಳ ಬೃಹತ್ ಕಾರ್ಯಕ್ರಮವನ್ನು ನಗರದ ಶ್ರೀನಿವಾಸ ಗಾರ್ಡನ್ನಲ್ಲಿ ಅ. 13ರಿಂದ ಆಯೋಜಿಸಲಾಗಿದೆ ಎಂದು ಶಾಖೆ ಅಧ್ಯಕ್ಷ ಪ್ರಕಾಶ ಕೊಠಾರಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ವಲಯಗಳಲ್ಲಿ ಉತ್ಪಾದಿಸಲ್ಪಟ್ಟ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಲೈವ್ ಸೆಮಿನಾರ್ಗಳನ್ನು ಸಂಟಿಸಲಾಗಿದೆ. ಇದರಿಂದ ಯುವ ಉದ್ಯಮಿಗಳ ಕಲಿಕೆಗೆ ಪ್ರೇರಣೆ ಸಿಗಲಿದೆ ಎಂದರು.
ಅ. 13ರಂದು ಬೆಳಗ್ಗೆ 9.15ಕ್ಕೆ ಉದ್ಘಾಟನೆ, 10ಕ್ಕೆ ಉಡಾನ್ ಎಕ್ಸಪೋ, 10.30ಕ್ಕೆ ಡಾ. ಜೈ ಮದಾನ್ ಅವರಿಂದ ಸೆಮಿನಾರ್ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಗುಂಪು ಚರ್ಚೆ, ಸಂಜೆ ಸುಫಿಯಾನ್ ಶಾಮ್ ಕಾರ್ಯಕ್ರಮ ನಡೆಯಲಿದೆ.
ಅ. 14ರಂದು ಬೆಳಗ್ಗೆ 10.30ಕ್ಕೆ ಆನಂದ ಚೋಡಿರ್ಯಾ ಅವರಿಂದ ಉದ್ಯಮಶೀಲತೆ ಉಪನ್ಯಾಸ, ಮಧ್ಯಾಹ್ನ 2ಕ್ಕೆ ಜೆಬಿಎನ್ ಸಮಾವೇಶ, ಸಂಜೆ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.
ಅ. 15ರಂದು ಬೆಳಗ್ಗೆ 10.30ಕ್ಕೆ ಸೋನು ಶರ್ಮಾ ಅವರಿಂದ ಪ್ರಧಾನ ಭಾಷಣ, ಸಂಜೆ ಸಮಾರೋಪ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ.
ತಮ್ಮ ಉತ್ಪನ್ನಗಳು, ಸೇವೆಗಳು, ಮಾರಾಟ ಮತ್ತು ನೆಟ್ವಕಿರ್ಂಗ್ ಅನ್ನು ಸಮುದಾಯದ ಒಳಗೆ ಹಾಗೂ ಹೊರಗೆ ಪ್ರದರ್ಶನ ಮಾಡಲು ಜೀತೋ ಈ ಕಾರ್ಯಕ್ರಮ ಏರ್ಪಡಿಸಿದೆ. ಟ್ರೇಡ್ ಎಕ್ಸಪೋ, ಮಹಿಳಾ ಸಮಾವೇಶ, ಯುವ ಸಮಾವೇಶ, ಪವರ್ ಪ್ಯಾಕ್ ಸೆಷನ್ಸ್, ಅಧಿವೇಶನ, ಮನರಂಜನೆ, ುಡ್ ಕಾನಿರ್ವಲ್ ಮುಂತಾದ ಕಾರ್ಯಕ್ರಮಗಳು ನೋಡುಗರ ಮನ ತಣಿಸಲಿವೆ.
ಭರತ ಪಟವಾರಿ, ಪ್ರವಿಣ ಚೌಧರಿ, ಅಂಕಿತ, ಸಂಗೀತಾ ಸಂಘ್ವಿ, ಲಲಿತಾ ಸುರಾನಾ ಗೋಷ್ಠಿಯಲ್ಲಿದ್ದರು.