ಉದಯಲಿಂಗೇಶ್ವರ ಶಿವಯೋಗಿಗಳ ನೂತನ ಶಿಲಾಮಂಟಪ ಲೋಕಾರ್ಪಣೆ

Udayalingeshwara Shivayogi's new stone mandapam inaugurated
ನಾಗಠಾಣ ಗ್ರಾಮದಲ್ಲಿ ನಿರ್ಮಿಸಿದ ನೂತ ಉದಯಲಿಂಗೇಶ್ವರ ಶಿವಯೋಗಿಗಳ ದೇವಸ್ಥಾನ.
Published on

ವಿಜಯಪುರ : ತಾಲೂಕಿನ ನಾಗಠಾಣ ಗ್ರಾಮದಲ್ಲಿ ಮಹಾ ಶಿವರಾತ್ರಿ ನಿಮಿತ್ತ ಉದಯ ಲಿಂಗೇಶ್ವರ ಜಾತ್ರಾ

ಮಹೋತ್ಸವ ಫೆ. 24 ರಿಂದ ಫೆ. 27 ರವರೆಗೆ ನಡೆಯಲಿದೆ. ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳು ಸಾನ್ನಿಧ್ಯ ವಹಿಸಲಿದ್ದಾರೆ.

ಫೆ. 24 ರಂದು ಬೆಳಿಗ್ಗೆ 7ಕ್ಕೆ ಕತೃಶ್ರೀ ಉದಯ ಲಿಂಗೇಶ್ವರ ಶಿವಯೋಗಿಗಳ ಗದ್ದುಗೆಗೆ ಮಹಾ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ, ಹೋಮ ಹವನ, ಬೆಳಗ್ಗೆ 9ಕ್ಕೆ ಪುಣೆಯ ವಿಶೇಷ ಡೋಲು ಕುಣಿತ ವೈಭವದೊಂದಿಗೆ ಉದಯ ಲಿಂಗೇಶ್ವರ ಶಿವಯೋಗಿಗಳ ನೂತನ ರಜತ ಮೂರ್ತಿಯ ಉತ್ಸವ, ಸುಮಂಗಲೆಯರ ಕುಂಭ ಕಳಸ ಜರುಗಲಿದ್ದು, ಮಧ್ಯಾಹ್ನ 12ಕ್ಕೆ ಕತೃಶ್ರೀ ಉದಯಲಿಂಗೇಶ್ವರ ಶಿವಯೋಗಿಗಳ ರಜತ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನದ ಲೋಕಾರ್ಪಣೆ ನಡೆಯುವುದು.

ಫೆ. 25 ರಂದು ಬೆಳಗ್ಗೆ 11ಕ್ಕೆ ಸುಮಂಗಲೆಯರ ಉಡಿ ತುಂಬುವುದು. ಮಧ್ಯಾಹ್ನ 2ಕ್ಕೆ ಸುಗಮ ಸಂಗೀತ, ಸಂಜೆ 6ಕ್ಕೆ ರಸಮಂಜರಿ ಹಾಗೂ ರಾತ್ರಿ ಭಜನೆ ನಡೆಯಲಿದೆ.

ಫೆ. 26 ರಂದು ಬೆಳಗ್ಗೆ 10ಕ್ಕೆ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಮಧ್ಯಾಹ್ನ 1ಕ್ಕೆ ಧರ್ಮಸಭೆ, ಸಂಜೆ ಶಿವತಾಂಡವ ನೃತ್ಯ, ಭಜನಾ ಪದಗಳ ಗಾಯನ ಜರುಗಲಿದೆ.

ಫೆ. 27 ರಂದು ಬೆಳಗ್ಗೆ 9ಕ್ಕೆ ಉದಯಲಿಂಗೇಶ್ವರ ಶಿವಯೋಗಿಗಳವರ ಅಡ್ಡ ಪಲ್ಲಕ್ಕಿ ಮಹಾ ಮಹೋತ್ಸವ, ಮಧ್ಯಾಹ್ನ 1ಕ್ಕೆ ಧರ್ಮಸಭೆ, 3ಕ್ಕೆ ನಗೆಹಬ್ಬ, ಸಂಜೆ 8ಕ್ಕೆ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಠದ ಪೀಠಾಧಿಪತಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net