

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನವರಾತ್ರಿ ಅಂಗವಾಗಿ ಶ್ರೀ ಉಡಚಮ್ಮ ದೇವಿ ಉತ್ಸವ ಸಂಭ್ರಮದಿಂದ ನಡೆಯಿತು.
ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ, ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ ಇವರ ನೇತೃತ್ವದಲ್ಲಿ ದಸರಾ ಮಹೋತ್ಸವ ಅಂಗವಾಗಿ ಮಂಗಳವಾರ ಉಡಚಮ್ಮ ದೇವಿ ಮಹಾಪೂಜೆ ಹಾಗೂ ಉಡಿತುಂಬುವ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು.
ವ್ಯಾಪಾರಸ್ಥರು, ಹಮಾಲಿ ಕಾರ್ಮಿಕರು, ರೈತರು, ಕೂಲಿಕಾರರು ಉಡಚಮ್ಮದೇವಿಗೆ ಮಹಾಪೂಜೆ ನೆರವೇರಿಸಿದರು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಘದ ಸಹಗೌರವ ಕಾರ್ಯದರ್ಶಿ ಚಂದ್ರಶೇಖರ ಪೂಜಾರ, ಪ್ರಕಾಶ ಓಸ್ತವಾಲ, ಅನೀಲಕುಮಾರ, ಜಿ.ಆರ್. ಬೆಲ್ಲದ, ಜೀತು ಓಸ್ತವಾಲ, ಬಸವರಾಜ ಅಕ್ಕಿ, ಹಮಾಲರ ಸಂಘದ ಅಧ್ಯಕ್ಷ ಕರಿಯಪ್ಪ ದಳವಾಯಿ, ಕಾರ್ಯಾಧ್ಯಕ್ಷ ಬಸಪ್ಪ ನೀರಲಗಿ, ದಾವಲಸಾಬ, ಸರದಾರಸಾಬ, ಸಂತೋಷ ಸೊಗಲದ, ರೈತರು ಉಪಸ್ಥಿತರಿದ್ದರು.