

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಹನ್ನೊಂದು ದಿನಗಳ ಕಾಲ ನಡೆದ ಉಡುಪಿ ಉಚ್ಚಿಲ ದಸರಾ ಅತ್ಯಂತ ವೈಭವದಿಂದ ಸಂಪನ್ನಗೊಳ್ಳುತ್ತಿದೆ. ದಸರಾ ವೈಭವನ್ನು ಕಣ್ತುಂಬಿಸಿ ಕೊಳ್ಳಲು ಈವರೆಗೆ 8 ರಿಂದ 9 ಲಕ್ಷ ಮಂದಿ ಉಚ್ಚಿಲಕ್ಕೆ ಬಂದಿದ್ದಾರೆ. 7-8 ಲಕ್ಷ ಜನ ಮಧ್ಯಾಹ್ನದ ಊಟ, ಸಂಜೆಯ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಕೋಟಿ ಸಂಖ್ಯೆಯಲ್ಲಿ ಕುಂಕುಮಾರ್ಚನೆ ಸೇವೆಯೂ ನಡೆದಿದೆ. ಇವೆಲ್ಲಾ ಯಶಸ್ಸಿನಲ್ಲಿ ಸರ್ಕಾರ, ಜನಪ್ರತಿನಿಧಿಗಳು, ಸರ್ವ ಸಮಾಜದ ಭಕತರು, ಸಮಾಜ ಬಾಂಧವರು, ಉಪ್ಪಳದಿಂದ ಶಿರೂರು ವರೆಗಿನ ಮೊಗವೀರ ಸಮಾಜದ ಸಮಸ್ತರ ಸಹಕಾರವೂ ಕಾರಣವಾಗಿದೆ ಎಂದು ದಸರಾ ರೂವಾರಿ ನಾಡೋಜ ಜಿ.ಶಂಕರ್ ಹೇಳಿದರು.
ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ನಾಲ್ಕನೇ ವರ್ಷದ ಉಡುಪಿ ಉಚ್ಚಿಲ ದಸರಾ- 2025 ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಬಡಾ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಮೆಂಡನ್, ದ.ಕ. ಮೊಗವೀರ ಮಹಾಜನ ಸಂಘ ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಉದ್ಯಮಿ ಶೇಖರ್ ಸಾಲ್ಯಾನ್ ಎರ್ಮಾಳು, ಮಾಜಿ ಜಿ.ಪಂ. ಸದಸ್ಯೆ ಶಿಲ್ಪಾ ಜಿ.ಸುವರ್ಣ, ಬಗ್ವಾಡಿ ಹೋಬಳಿ ಶಾಖೆ ಅಧ್ಯಕ್ಷ ಉದಯ್‌ಕುಮಾರ್ ಹಟ್ಟಿಯಂಗಡಿ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ದಸರಾ ಸಮಿತಿ ಅನಿವಾಸಿ ಭಾರತೀಯ ಸಮಿತಿ ಸಂಚಾಲಕ ಯುವರಾಜ್ ಸಾಲ್ಯಾನ್, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ಮಹಾಜನ ಮಹಿಳಾ ಸಂಘದ ಅಧ್ಯಕ್ಷೆ ಉಷಾ ರಾಣಿ, ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯಂತ ಅಮೀನ್ ಕೋಡಿ, ಸಮಿತಿಗಳ ಪ್ರಮುಖರಾದ ಪದ್ಮಾಕರ ಮೆಂಡನ್, ದಿನೇಶ್ ಎರ್ಮಾಳು, ಗಿರೀಶ್ ಸುವರ್ಣ, ಶಿಲ್ಪಾ ಶಮಿತ್ ಕುಂದರ್, ಪದ್ಮಾಕರ ಮೆಂಡನ್, ಸುಗುಣಾ ಕರ್ಕೇರ, ಮನೋಜ್ ಕಾಂಚನ್, ಸತೀಶ್ ಕುಂದರ್, ಕೇಶವ ಕೋಟ್ಯಾನ್ ಉಪಸ್ಥಿತರಿದ್ದರು. ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು ವಂದಿಸಿದರು. ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ ವಂದಿಸಿದರು.