ಬಾಲಕನ ಹುಚ್ಚಾಟಕ್ಕೆ ತಂದೆ ಮಗ ಸಾವು; ಏನಿದು ಪ್ರಕರಣ?

vkjzfgvjb
ಮೃತ ಬಾಲಕ
Published on

ಉಡುಪಿ: ಲಾರಿಯೊಂದರಲ್ಲಿ ಕ್ಲೀನರ್ ಆಗಿ ದುಡಿಯುತ್ತಿದ್ದ 16 ವರ್ಷದ ಬಾಲಕನೊಬ್ಬನ ಹುಚ್ಚಾಟಕ್ಕೆ ತಂದೆ ಮತ್ತು ಮಗ ಮೃತಪಟ್ಟ ಘಟನೆ ಉಚ್ಚಿಲದಲ್ಲಿ ನಡೆದಿದೆ. ಬಾಲಕನಿಗೆ ಲಾರಿ ಚಲಾಯಿಸುವುದರಲ್ಲಿ ಅತೀವ ಆಸಕ್ತಿ. ಇದೀಗ ಈ ಆಸಕ್ತಿ ಇಬ್ಬರ ಸಾವಿಗೆ ಕಾರಣವಾಗಿದೆ.

ಅಪಘಾತವಾದ ಲಾರಿಯಲ್ಲಿ ಬಾಲಕ ಕ್ಲೀನರ್ ಆಗಿ ದುಡಿಯುತ್ತಿದ್ದ. ಈ ಹಿಂದೆಯೂ ಸಾಕಷ್ಟು ಬಾರಿ ಲಾರಿ ಚಾಲನೆ ಮಾಡಿ ಸಾಹಸ ಮೆರೆದಿದ್ದ. ಅಂದು ಕೂಡ ಬಾಲಕನಿಗೆ ಲಾರಿ ಓಡಿಸುವ ಅವಕಾಶವನ್ನು ಚಾಲಕ ಶೇಖರ್ ನೀಡಿದ್ದ. ಈ ವೇಳೆ ಬಾಲಕನಿಗೆ ನಿದ್ರೆ ಆವರಿಸಿದೆ. ಈ ವೇಳೆ ಚಾಲಕ ಮುಂದೆ ಟೀ ಶಾಪ್ ಇದೆ. ಅಲ್ಲಿ ಟೀ ಕುಡಿದ ಬಳಿಕ ಎಂದಿನಂತೆ ನಾನು ಗಾಡಿ ಓಡಿಸುತ್ತೇನೆ ಎಂದು ಚಾಲಕ ಶೇಖರ್ ಹೇಳಿದ್ದಾನೆ.

ನಿದ್ದೆ ಮಂಪರಿನಲ್ಲಿ ಲಾರಿ ಚಲಾಯಿಸಿದ ಬಾಲಕ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಢಿಕ್ಕಿ ಹೊಡೆದಿದ್ದಾನೆ. ಅಪಘಾತದಿಂದ ಬೆಳಗಾವಿ ಮೂಲದ ಪ್ರಭಾಕರ ಮತ್ತವರ ಮಗ ಸಮರ್ಥ್​ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕ ಶೇಖರ್ ಅನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಚಾಲಕನ ಡ್ರೈವಿಂಗ್ ಲೈಸನ್ಸ್, ಲಾರಿ ಏಜನ್ಸಿಯ ಪರವಾನಿಗೆ ರದ್ದತಿಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net