

ಮಾಯಕೊಂಡ: ಹುಚ್ಚವ್ವನಹಳ್ಳಿಯಿಂದ ಮಾಯಕೊಂಡ ರಸ್ತೆಯ ಹೊರವಲಯದ ಇಟಗಿ ಕರಿಯಮ್ಮ ದೇವಾಲಯದ ಹುಂಡಿ ಒಡೆದು ಸಾವಿರಾರು ರೂ. ದೋಚಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಬಾಗಿಲು ಸರಳುಗಳನ್ನು ಮುರಿದು ಒಳನುಗ್ಗಿದ ಕಳ್ಳರು ಕಾಣಿಕೆ ಹುಂಡಿಯನ್ನು ಕದ್ದು, ಹಣ ದೋಚಿ ಸಮೀಪದ ಅಡಕೆ ತೋಟದಲ್ಲಿ ಹುಂಡಿ ಬಿಸಾಕಿ ಪರಾರಿಯಾಗಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ಇಲ್ಲಿಯೇ ನಾಲ್ಕು ಬಾರಿ ಹುಂಡಿ ಹಣ ಕಳ್ಳತನವಾಗಿದೆ.
ಬುಧವಾರ ಸ್ಥಳಕ್ಕೆ ಮಾಯಕೊಂಡ ಪೊಲೀಸ್ ಸಬ್ ಇನ್ಸ್ಸ್ಪೆಕ್ಟರ್ ಎಸ್.ಬಿ. ಅಜಯ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.
ಹುಚ್ಚವ್ವನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಆರ್.ಸಿ. ಗಣೇಶ್, ಉಪಾಧ್ಯಕ್ಷ ಕೆ.ಜಿ. ಸತೀಶ್, ಸದಸ್ಯ ಎನ್.ಬಿ. ಮಹೇಶ್, ರೈತ ಮುಖಂಡ ಹುಚ್ಚವ್ವನಹಳ್ಳಿ ಗಣೇಶ್ ಇತರರು ಇದ್ದರು.