ಉಚ್ಚಿಲ ದಸರಾ ಮಹೋತ್ಸವ ಚಿತ್ರ ಬಿಡಿಸುವ ಸ್ಪರ್ಧೆ

udp-yashpal suvarna
Published on

ಉಡುಪಿ: ಮಹಾಲಕ್ಷ್ಮಿ ಕೋ-ಆಪರೇಟಿವ್​ ಬ್ಯಾಂಕ್​ ವತಿಯಿಂದ ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದ ಸಹಯೋಗದೊಂದಿಗೆ ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ಅ. 22ಕ್ಕೆ ಬೆಳಗ್ಗೆ 9.30ಕ್ಕೆ ಉಚ್ಚಿಲ ಮೊಗವೀರ ಭವನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದ್ದಾರೆ.

ಚಿತ್ರ ಬಿಡಿಸುವ ಸ್ಪರ್ಧೆಯ ಚಿತ್ರ ರಚನೆಯ ವಿಷಯವಾಗಿ 'ನಾಡಹಬ್ಬ ದಸರಾ' ಆಯ್ಕೆ ಮಾಡಿದ್ದು, ಸ್ಪರ್ಧಿಗಳು ಈ ವಿಷಯಕ್ಕೆ ಸಂಬಂಧಿಸಿದ ಚಿತ್ರವನ್ನು ಬಿಡಿಸಬೇಕು. ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಿದ್ದು ಕಿರಿಯರ ವಿಭಾಗ (1 ರಿಂದ 4ನೇ ತರಗತಿ), ಪ್ರಾಥಮಿಕ ವಿಭಾಗ ( 5 ರಿಂದ 7 ನೇ ತರಗತಿ), ಹೈಸ್ಕೂಲ್​ ವಿಭಾಗ ( 8 ರಿಂದ 10ನೇ ತರಗತಿ), ಕಾಲೇಜು ವಿಭಾಗ (ಪದವಿ ಪೂರ್ವ ಮತ್ತು ಪದವಿ ತರಗತಿ) ಹಾಗೂ ಸಾರ್ವಜನಿಕ ವಿಭಾಗದಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧಾಳುಗಳಿಗೆ ಡ್ರಾಯಿಂಗ್​ ಶೀಟ್​ ಸ್ಥಳದಲ್ಲೇ ಒದಗಿಸಲಾಗುವುದು. ಉಳಿದ ಪರಿಕರಗಳನ್ನು ಅವರೇ ತರಬೇಕು. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವೀತಿಯ, ತೃತೀಯ ಹಾಗೂ 3 ಸಮಾಧಾನಕರ ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡಲಾಗುವುದು. ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಪುರಸ್ಕರಿಸಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9972120332, 9686124769 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net