ಕಾಸರಗೋಡು: ಕುಂಬ್ಡಾಜೆ ಗ್ರಾಮದ ಉಬ್ರಂಗಳ ಶ್ರೀ ಐವರು ವಿಷ್ಣುಮೂರ್ತಿ ಚಾಮುಂಡಿ ದೈವಸ್ಥಾನದಲ್ಲಿ 26 ವರ್ಷಗಳ ಬಳಿಕ ಡಿ.22ರಿಂದ 30ರ ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಹಾಗೂ ಕಳಿಯಾಟ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರಿನಾರಾಯಣ ಶಿರಂತಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
22ರಿಂದ ಮೊದಲ್ಗೊಂಡು 25ರವರೆಗೆ ದೇಲಂಪಾಡಿ ಗಣೇಶ ತಂತ್ರಿಗನೇತೃತ್ವದಲ್ಲಿ ಶ್ರೀ ದೈವಗಳ ಪುನರ್ಪ್ರತಿಷ್ಠಾ, ಬ್ರಹ್ಮಕಲಶಾಭಿಷೇಕ, 30ರ ತನಕ ಶ್ರೀ ದೈವಗಳ ಕಳಿಯಾಟ ಮಹೋತ್ಸವ ವಿವಿಧ ಧಾರ್ಮಿಕ, ಅಧ್ಯಾತ್ಮಿಕ, ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಕುರುಪ್ ಮಾಸ್ಟರ್, ಕುಂಞಿಕಣ್ಣ ಉಳಿಯ, ತಂಬಾನ್ ಆನೆಕಲ್ಲು, ಸುನೀಲ್ ಕುಮಾರ್ ಅನಂತಪುರ, ಅಖಿಲೇಶ್ ನಗುಮುಖಂ, ಅಶೋಕನ್ ಅದೂರು ಉಪಸ್ಥಿತರಿದ್ದರು.
ಸಮಿತಿ ರಚನೆ : ಪುನರ್ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ಕಳಿಯಾಟ ಮಹೋತ್ಸವ ಯಶಸ್ಸಿಗಾಗಿ ಸಮಿತಿ ರಚಿಸಲಾಗಿದ್ದು, ರಕ್ಷಾಧಿಕಾರಿಯಾಗಿ ಹರೀಶ್ ಕುಣಿಕುಳ್ಳಾಯ, ನಡುಮನೆ-ಉಬ್ರಂಗಳ, ಕ್ಷೇತ್ರ ಕಾರ್ನವರ್ ಶ್ರೀ ಜಯರಾಮ ನೆಲ್ಲಿಕುಂಜೆ, ಗೌರವಾಧ್ಯಕ್ಷರಾಗಿ ಗೋಪಾಲಕೃಷ್ಣ ಪೈ ಬದಿಯಡ್ಕ, ಅಧ್ಯಕ್ಷರಾಗಿ ಹರಿನಾರಾಯಣ ಮಾಸ್ಟರ್ ಶೀರಂತ್ತಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಕುರುಪ್ ಮಾಸ್ಟರ್ ಉಬ್ರಂಗಳ, ಕೋಶಾಧಿಕಾರಿಯಾಗಿ ಕುಞಿಕಣ್ಣನ್ ಉಳಿಯ ಆಯ್ಕೆಯಾದರು.
ಸಮಾರೋಪ: 22ರಂದು ಎಡನೀರು ಮಠಾೀಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸಭಾ ಕಾರ್ಯಕ್ರಮ ಉದ್ಘಾಟನೆ ಹಾಗೂ ಆಶೀರ್ವಚನ ನೀಡುವರು. 25ರಂದು ನಡೆಯುವ ಧಾರ್ಮಿಕ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸುವರು. 26ರಂದು ಪ್ರಥಮ ಕಳಿಯಾಟ ಆರಂಭಗೊಂಡು 30ರಂದು ಶ್ರೀ ಚೌಕಾರು ಗುಳಿಗ ದೈವನರ್ತನದೊಂದಿಗೆ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಾರೋಪಗೊಳ್ಳುವುದು.