ಉಬ್ರಂಗಳ ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ

edaneeru
Published on

ಬದಿಯಡ್ಕ : ಉಬ್ರಂಗಳ ಶ್ರೀ ಐವರು ವಿಷ್ಣುಮೂರ್ತಿ ಚಾಮುಂಡಿ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಕಳಿಯಾಟ ಮಹೋತ್ಸವ ಡಿಸೆಂಬರ್ 22ರಿಂದ 30ರ ತನಕ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಭಾನುವಾರ ಶ್ರೀಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು.

ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳನ್ನು ಸಿಂಗಾರಿ ಮೇಳ ಮತ್ತು ಪೂರ್ಣಕುಂಭದೊಂದಿಗೆ ಶ್ರೀ ಕ್ಷೇತ್ರಕ್ಕೆ ಸ್ವಾಗತಿಸಲಾಯಿತು. ಹರೀಶ್ ಕುಣಿಕುಳ್ಳಯ ಕಾರ್ಯಕ್ರಮ ಉದ್ಘಾಟಿಸಿದರು. ನಿಧಿ ಸಂಚಯನಕ್ಕೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಸಾಸ್ತಾರ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ.ಕಿಶೋರ್ ಕುಮಾರ್ ಉಬ್ರಂಗಳ ಚಾಲನೆ ನೀಡಿದರು. ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಹರಿನಾರಾಯಣ ಶಿರಂತಡ್ಕ ಅಧ್ಯಕ್ಷತೆ ವಹಿಸಿದ್ದರು.

ವಸಂತ ಪೈ ಬದಿಯಡ್ಕ, ಜಯದೇವ ಖಂಡಿಗೆ, ಡಾ ವೇಣುಗೋಪಾಲ ಕಳೆಯತ್ತೊಡಿ, ಆನಂದ ಮವ್ವಾರು, ಯೋಗೀಶ ಶರ್ಮಾ ಬಳ್ಳಪ್ಪದವು, ಪ್ರೊ.ಎ. ಶ್ರೀನಾಥ್, ಪ್ರಶಾಂತ್ ಕುಣಿಕುಳ್ಳಾಯ, ತಂಬಾನ್ ಆನೆಕ್ಕಲ್, ಮಣಿಕಂಠನ್ ಕೊಳಗ, ಸಂಜೀವ ಶೆಟ್ಟಿ ಮೊಟ್ಟೆಕ್ಕುಂಜ, ಗೋಪಾಲಕೃಷ್ಣ ವಾಂತಿಚ್ಚಾಲು, ಸತೀಶ್ ಮಾಸ್ತರ್, ಕಿರಣ್ ಕುಮಾರ್ ಕುಣಿಕುಳ್ಳಾಯ, ರಾಜಶೇಖರ ಪದ್ಮಾರು,ಬಾಬು ಚೆರ್ವತೂರ್ ಕುರುಪ್, ಶ್ರೀಧರ ಮಾಸ್ತರ್ ಡೆಕ್ಕತ್ತೊಡಿ, ಜಯನ್ ಕಾಸರಗೋಡು, ಸುವರ್ಣ ಮಾಸ್ತರ್, ಚಂದ್ರಶೇಖರ ಅನಂತಪುರ, ರಾಜೀವ್ ಚೆರುವತ್ತೂರ್, ನಾರಾಯಣ ಸೂರಂಬೈಲ್, ಸತೀಶ್ ಉಬ್ರಂಗಳ ಮುಂತಾದವರು ಉಪಸ್ಥಿತರಿದ್ದರು. ಚಂದ್ರಶೇಖರ ಕುರುಪ್ ಸ್ವಾಗತಿಸಿ, ಸುನಿಲ್ ಕುಮಾರ್ ಅನಂತಪುರ ವಂದಿಸಿದರು. ರಮೇಶ್ ಕೃಷ್ಣ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net