ಸಂಘಟನೆಯಿಂದ ಸಮಾಜದ ಅಭಿವೃದ್ಧಿ - ನಿವೃತ್ತ ಮುಖ್ಯಶಿಕ್ಷಕಿ ಮಾಲತಿ ನುಳಿಯಾಲು ಹೇಳಿಕೆ - ಕರಾಡ ಬ್ರಾಹ್ಮಣರ ಉಬ್ಬಿರಾನ್ನು ಏಕು ದೀಸು

PTR_7 AUG_1
Published on

ಪುತ್ತೂರು: ಸಂಘಟನೆಯಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ. ಕಾರ್ಯಕ್ರಮಗಳ ಆಯೋಜನೆಯಿಂದ ಸಮುದಾಯದ ಪ್ರತಿಯೊಬ್ಬರನ್ನು ಒಗ್ಗೂಡಿಸಬಹುದಾಗಿದೆ ಎಂದು ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ ನಿವೃತ್ತ ಮುಖ್ಯ ಶಿಕ್ಷಕಿ ಮಾಲತಿ ನುಳಿಯಾಲು ಹೇಳಿದರು.


ನಿಡ್ಪಳ್ಳಿಯ ಬುಳೇನಡ್ಕ ಗದ್ದೆಯಲ್ಲಿ ಪುತ್ತೂರು ನಿಡ್ಪಳ್ಳಿ ಕರಾಡ ಬ್ರಾಹ್ಮಣ ಸೇವಾ ಸಮಿತಿ, ಕರಾಡ ಸೇವಾ ಸಮಿತಿ ಸುಳ್ಯಪದವು ಮತ್ತು ಕರಾಡ ಯುವ ವೇದಿಕೆ ಆಶ್ರಯದಲ್ಲಿ ನಡೆದ ಕಜಮೂಲೆ ವೆಂಕಟೇಶಣ್ಣ, ದರ್ಭೆ ಫಾಟೆ ತಿರುಪತಿಣ್ಣ, ಮುಂಡೂರು ಮುರಳಿಣ್ಣ ಇವರುಗಳ ಸ್ಮರಣಾರ್ಥ ಕರಾಡ ಬ್ರಾಹ್ಮಣರ ’ಉಬ್ಬಿರಾನ್ನು ಏಕು ದೀಸು’(ಕೆಸರಿನಲ್ಲಿ ಒಂದು ದಿನ) ಕಾರ್ಯಕ್ರಮಕ್ಕೆ ಗದ್ದೆಗೆ ಬಾಗಿನ ಸಮರ್ಪಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಅಧ್ಯಕ್ಷ ರಮಾನಂದ ಎಡಮಲೆ, ಮಂಗಳೂರಿನ ಮೆಡಿಗ್ಲೋಬ್ ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ ಭಟ್ ಬೀರಮೂಲೆ, ಬಾಯಾರಿನ ಹೋಮಿಯೋಪಥಿ ವೈದ್ಯ ಡಾ. ಮನು ಕೆದುಕೋಡಿ, ಶಂಕರ ಸದನ ಕ್ರೀಡಾ ಸಮಿತಿ ಪೆರ್ಲ ಅಧ್ಯಕ್ಷ ವಿಘ್ನೇಶ್ ಶಿರಂತಡ್ಕ ಮಾತನಾಡಿದರು.

ಕರಾಡ ಬ್ರಾಹ್ಮಣ ಸೇವಾ ಸಮಿತಿ ನಿಡ್ಪಳ್ಳಿ, ಪುತ್ತೂರು ಅಧ್ಯಕ್ಷ ಕೃಷ್ಣ ಭಟ್ ಬೀರಮೂಲೆ, ಪ್ರೆಸ್ಟೀಜ್ ಗ್ರೂಪ್ ಬೆಂಗಳೂರು ಸಹಾಯಕ ಮ್ಯಾನೇಜರ್ ರವೀಶ್ ಸಿ. ಎಚ್., ಬಿಎಸ್‌ಎನ್‌ಎಲ್ ಮಂಗಳೂರು ನಿವೃತ್ತ ಅಽಕಾರಿ ಶಿವಶಂಕರ ಭಟ್ ಕನ್ನಡ್ಕ, ಬಿಎಸ್‌ಎನ್‌ಎಲ್ ಕಾಸರಗೋಡು ನಿವೃತ್ತ ಅಽಕಾರಿ ಮಧುಸೂದನ್ ಭಟ್ ತೈರೆ, ಕೆ. ಪಿ. ಸಿ. ಎಲ್. ಲಿಂಗನಮಕ್ಕಿ ಸಹಾಯಕ ಕಾರ್ಯವಾಹಕ ಇಂಜಿನಿಯರ್ ದುರ್ಗಾಪ್ರಸಾದ್ ಡಿ., ಕರಾಡ ಯುವ ವೇದಿಕೆ ಕಾರ್ಯದರ್ಶಿ ಪ್ರಜ್ವಲ್ ಘಾಟೆ, ಶಾಲಿನಿ ಕಜಮೂಲೆ, ಲಲಿತಾ ಭಟ್ ಘಾಟೆ, ಕೃಷ್ಣ ಕುಮಾರ್ ಮುಂಡೂರು ಉಪಸ್ಥಿತರಿದ್ದರು. ಶ್ರುತಿ ಬುಳೇನಡ್ಕ, ವಿಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.

*ಸಮಾರೋಪ ಕಾರ್ಯಕ್ರಮ: ಬ್ಯಾಂಕ್ ಉದ್ಯೋಗಿ ಸುಧಾಕರ ಭಟ್ ಬಂಟಾಜೆ, ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಕಾರ್ಯದರ್ಶಿ ಗಣೇಶ್ ಚೇರ್ಕೂಡ್ಲು ಮಾತನಾಡಿದರು. ಹಿರಿಯರಾದ ಸುಬ್ರಹ್ಮಣ್ಯ ಭಟ್ ಇಂದಾಜೆ, ಹೋಟೆಲ್ ಸಂತೃಪ್ತಿ ಪುತ್ತೂರು ಮಾಲೀಕ ಗಿರೀಶ್ ಚೋಕೆಮೂಲೆ, ಕರಾಡ ಬ್ರಾಹ್ಮಣ ಸೇವಾ ಸಮಿತಿ ನಿಡ್ಪಳ್ಳಿ, ಪುತ್ತೂರು ಕಾರ್ಯದರ್ಶಿ ರಾಮಕೃಷ್ಣ ಭಟ್ ಚಂದುಕೂಡ್ಲು, ಶಂಕರ ಭಾರತಿ ಸೌಹಾರ್ದ ಸಹಕಾರಿ ಪುತ್ತೂರು ಅಧ್ಯಕ್ಷ ನಾಗರಾಜ ಭಟ್ ಆರ್ತಿಕೂಡ್ಲು, ಯುವ ಕರಾಡ ವೇದಿಕೆ ಇದರ ಉಪಾಧ್ಯಕ್ಷೆ ಶ್ರೀಲಕ್ಷ್ಮೀ ಮಠದಮೂಲೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net