

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು (ಯುಎಎಸ್-ಬಿ) ಕನ್ನಡದಲ್ಲಿ ಕೃಷಿ ಬರವಣಿಗೆಯನ್ನು ಪ್ರೋತ್ಸಾಹಿಸಲು ‘ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ’ ನೀಡುತ್ತಿದ್ದು, 2024ರಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾಗಿರುವ ಕೃಷಿ ಸಂಬಂಧಿತ ಕನ್ನಡ ಪುಸ್ತಕಗಳನ್ನು ಲೇಖಕರಿಂದ ಆಹ್ವಾನಿಸಿದೆ.
ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಲೇಖಕರು ನಿಗದಿತ ನಮೂನೆಯಲ್ಲಿ ಪ್ರಶಸ್ತಿಗೆ ಸಲ್ಲಿಸುವ ಮೂರು ಪ್ರತಿಗಳನ್ನು ತಮ್ಮ ಸ್ವ ವಿವರಗಳೊಂದಿಗೆ ಜು.30ರೊಳಗೆ ಮುಖ್ಯಸ್ಥರು, ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು-560065 ಈ ವಿಳಾಸಕ್ಕೆ ಕಳುಹಿಸುವುದು. ಹೆಚ್ಚಿನ ವಿವರಗಳಿಗೆ ದೂ: 080-23330153 ವಿಸ್ತರಣೆ - 373 ಸಂಪರ್ಕಿಸಬಹುದು ಎಂದು ವಿವಿ ಪ್ರಕಟಣೆ ತಿಳಿಸಿದೆ.