ಸವಾಲುಗಳನ್ನು ಎದುರಿಸಿ ಸಾಗಿದರೆ ಯಶಸ್ಸು

23 HRR
Published on

ಹರಿಹರ: ಕ್ಲಿಷ್ಟಕರ ಸವಾಲುಗಳನ್ನು ಎದುರಿಸಿ ಮುಂದೆ ಸಾಗಿದಾಗ ಯಶಸ್ಸು ಸಾಧ್ಯ ಎಂದು ಯುಎಇ ಎಕ್ಸಿಕ್ಯುಟಿವ್ ಕೋಚ್ ಪೊ›.ಎ. ಹರಿಹರನ್ ತಿಳಿಸಿದರು.

ನಗರದ ಕಿಲೋಸ್ಕರ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್​ವೆುಂಟ್ (ಕಿಮ್್ಸ)ನಲ್ಲಿ ಶನಿವಾರ ಆಯೋಜಿಸಿದ್ದ ಬಿಜೈಮಾ-25 ಮ್ಯಾನೇಜ್​ವೆುಂಟ್ ಫೆಸ್ಟ್ ಅನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಎಲ್ಲ ಅಡೆತಡೆ ಮತ್ತು ವಿಲಕ್ಷಣತೆಗಳ ವಿರುದ್ಧ ಹೋರಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಸೈದ್ಧಾಂತಿಕ ಜ್ಞಾನ ಪಡೆಯುವ ಜತೆಗೆ ಪ್ರಾಯೋಗಿಕ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ವೈ.ಎಂ. ಗಿರೀಶ್ ಮಾತನಾಡಿ, ನಾಯಕತ್ವದಿಂದ ತಂಡಗಳನ್ನು ನಿರ್ವಹಿಸಲು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನೈಜ ನಿರ್ವಹಣಾ ಕೌಶಲಗಳನ್ನು ಪಡೆಯಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಕಿಮ್್ಸ ನಿರ್ದೇಶಕ ಡಾ. ನಂದೀಶ್ ವಿ. ಹಿರೇಮಠ ಮಾತನಾಡಿ, ವಿವಿಧ ಜಿಲ್ಲೆಗಳಿಂದ 21 ತಂಡಗಳ 220ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಅತ್ಯುತ್ತಮ ವ್ಯವಸ್ಥಾಪಕ, ಹಣಕಾಸು, ಮಾರುಕಟ್ಟೆ, ಮಾನವ ಸಂಪನ್ಮೂಲ ನಿರ್ವಹಣೆ ಹಾಗೂ ಸಾಂಸ್ಕೃತಿಕ ವಿಷಯಗಳ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಬೆಳ್ಳೂಡಿಯ ಕಾರ್ಗಿಲ್ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಎನ್.ಇ. ಪ್ರವೀಣ್, ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ಸೆಲ್ವಂಪಂಡಿ, ಡಾ. ಬಿ.ವಿ. ನಾಗರಾಜ್, ಡಾ. ವಿನಯ್ ಭೂಷಣ್, ಪೊ›.ಎನ್. ಯೋಗೇಶ್, ಪೊ›. ಕಿರಣ್ ಕುಮಾರ್ ಇತರರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net