‘ಪಿಪಿಇ ಕಿಟ್ ವಿವಾದ’ಕ್ಕೆ ಸಿಲುಕಿದ ಖಾದರ್

kadher new
Published on

ಮಂಗಳೂರು: ಕರೊನಾ ಸೋಂಕಿನಿಂದ ಮೃತಪಟ್ಟ ವೃದ್ಧರೊಬ್ಬರ ಮೃತದೇಹದ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ವಿವಾದಕ್ಕೆ ಸಿಲುಕಿದ್ದಾರೆ.

ಮೃತದೇಹವನ್ನು ಮಂಗಳೂರಿನ ಬೋಳಾರ ಮಸೀದಿಯ ದಫನ ಭೂಮಿಯಲ್ಲಿ ಮಂಗಳವಾರ ರಾತ್ರಿ ದಫನ ಮಾಡಲಾಗಿತ್ತು. ಆರೋಗ್ಯ ಇಲಾಖೆಯ ಸಿಬ್ಬಂದಿ ಜತೆಗೆ ಖಾದರ್ ದಫನ ಕಾರ್ಯದಲ್ಲಿ ಸೇರಿದ್ದಲ್ಲದೆ, ಗುಂಡಿ ತೋಡುವಲ್ಲಿಯೂ ಕೈಜೋಡಿಸಿದ್ದರು. ಮೃತದೇಹವನ್ನು ಗುಂಡಿಯಲ್ಲಿಟ್ಟು ಮಣ್ಣು ಮುಚ್ಚುವ ಕೆಲಸವನ್ನೂ ಮಾಡಿದ್ದರು. ಈ ವೇಳೆ ಇತರ ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್ ಧರಿಸಿದ್ದರೂ ಖಾದರ್ ಮಾಸ್ಕ್ ಮಾತ್ರವೇ ಧರಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಯಿತು. ಆದರೆ ಈ ನಡೆಯನ್ನು ಕೆಲವರು ಸಮರ್ಥಿಸಿಕೊಂಡು, ಮೃತರಿಗೆ ಶಾಸಕರು ಗೌರವ ನೀಡಲು ತೆರಳಿದ್ದು ಸೂಕ್ತ ಎಂದು ಮೆಚ್ಚುಗೆಯನ್ನೂ ವ್ಯಕ್ತಪ ಡಿಸಿದರು.

ಮೃತದೇಹದಿಂದ ಹರಡುವುದಿಲ್ಲ: ಈ ಬಗ್ಗೆ ಸ್ಪಷ್ಟನೆ ನೀಡಿದ ಖಾದರ್, ಅಂತ್ಯಸಂಸ್ಕಾರದಲ್ಲಿ ಕೆಲಸ ಮಾಡಬೇಕೆಂಬ ಭಾವನೆ ಬಂತು. ಹಾಗಾಗಿ ಭಾಗಿಯಾದೆ. ಸೋಂಕಿತರ ಮೃತದೇಹದಿಂದ ವೈರಸ್ ಹರಡುತ್ತದೆ ಎಂದು ವೈದ್ಯಕೀಯ ಅಧ್ಯಯನದಲ್ಲಿ ತಿಳಿಸಿಲ್ಲ. ಹಾಗಾಗಿ ಪಿಪಿಇ ಕಿಟ್ ಬಳಸಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net