ರಸ್ತೆಬದಿ ನಿಲ್ಲಿಸಿದ್ದ ಲಾರಿಯಿಂದ ಟೈರ್ ಕಳವು

BYN-Sept15-3- Tire Stolan-1
Published on

ಬೈಂದೂರು: ಶಿರೂರು ಟೋಲ್‌ಗೇಟ್ ಬಳಿ ರಾತ್ರಿ ವೇಳೆ ನಿಲ್ಲಿಸಿದ್ದ ಲಾರಿಯಿಂದ ಟೈರ್ ಕಳವು ಮಾಡಿರುವ ಘಟನೆ ನಡೆದಿದೆ.
ಅಂಕೋಲಾ ಮೂಲದ ಲಾರಿಯನ್ನು ಮಂಗಳೂರಿಗೆ ತೆರಳುವ ಸಂದರ್ಭ ರಾತ್ರಿ ವಿಶ್ರಾಂತಿಗಾಗಿ ಟೋಲ್‌ಗೇಟ್‌ನ ಎಡಭಾಗದಲ್ಲಿ ನಿಲ್ಲಿಸಲಾಗಿತ್ತು.

ಚಾಲಕ ನಿದ್ರೆಗೆ ಜಾರಿದ ವೇಳೆ ಕಳ್ಳರ ತಂಡ ಲಾರಿಯ 5ಟೈರ್‌ಗಳನ್ನು ಬಿಚ್ಚಿ ಕದ್ದೊಯ್ದಿದೆ. ಹೊಸ ಲಾರಿಯಾಗಿದ್ದು ಟೈರ್‌ನ ಬೆಲೆ ರೂ.ಒಂದು ಲಕ್ಷಕ್ಕೂ ಅಧಿಕ ಮೌಲ್ಯದ್ದಾಗಿದೆ ಎಂದು ಚಾಲಕ ಶಾಯಿಲ್ ಹೇಳಿದ್ದಾರೆ.

ಟೈರ್ ಕಳವು ಪ್ರಕರಣ ಬೇಧಿಸಲು ಪೊಲೀಸ್ ತಂಡ ಕಾರ್ಯಪ್ರವತ್ತವಾಗಿದೆ ಎಂದು ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net