ಕೃಷಿ ಹೊಂಡದ ನೀರಿನಲ್ಲಿ ಮುಳುಗಿದ ಬಾಲಕರಿಬ್ಬರ ಸಾವು

30.04.2024 SDLP 01
Published on

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ಕೆಂಪನಹಳ್ಳಿಯಲ್ಲಿ ಕೃಷಿಹೊಂಡದ ನೀರಿನಲ್ಲಿ ಮುಳುಗಿ ಬಾಲಕರಿಬ್ಬರು ಮೃತಪಟ್ಟಿದ್ದಾರೆ.

ಗ್ರಾಮದ ಸುಬ್ರಮಣಿ ಹಾಗು ಗೌರಮ್ಮ ದಂಪತಿಯ ಮಗ ನಿತಿನ್‌ಕುಮಾರ್ (15) ಹಾಗೂ ಅಂಗರೇಕನಹಳ್ಳಿಯ ಹನುಮಂತಪ್ಪ ಹಾಗು ಪದ್ಮ ದಂಪತಿಗಳ ಪುತ್ರ ಮಂಜುನಾಥ್ (16) ಮೃತರು.

ಶಿಡ್ಲಘಟ್ಟ ತಾಲೂಕಿನ ಕೆಂಪನಹಳ್ಳಿಯ ಸುಬ್ರಮಣಿ ಹಾಗು ಗೌರಮ್ಮ ಮನೆಗೆ ಬಂದಿದ್ದ ಅಂಗರೇಕನಹಳ್ಳಿಯ ಮಂಜುನಾಥ್ ಹಾಗು ನಿತಿನ್ ಕುಮಾರ್ ಮಂಗಳವಾರ ಮನೆಯ ಹಿಂಭಾಗದ ತೋಟದಲ್ಲಿರುವ ಕೃಷಿಹೊಂಡಕ್ಕೆ ಈಜಾಡಲು ಹೋಗಿದ್ದಾರೆ. ಇದೇ ವೇಳೆ ನೀರಿನಲ್ಲಿ ಮುಳುಗಿ, ಮತ್ತೆ ಮೇಲಕ್ಕೆ ಬಂದಿಲ್ಲ. ಇದನ್ನು ಕಂಡ ಸ್ಥಳದಲ್ಲಿದ್ದ ಮತ್ತೊಬ್ಬ ಹುಡುಗ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ.

ಸ್ಥಳಕ್ಕೆ ಜನರು ಬರುವಷ್ಟರಲ್ಲಿ ಇಬ್ಬರ ಬಾಲಕರು ಮೃತಪಟ್ಟಿದ್ದು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಘಟನೆಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net