

ಶಿವಮೊಗ್ಗ: ತಾಲೂಕಿನ ಯಡವಾಲ ಗ್ರಾಮದಲ್ಲಿ ತಡರಾತ್ರಿ ಕೃಷಿ ಹೊಂಡಕ್ಕೆ ಬಿದ್ದು ಯುವಕರಿಬ್ಬರು ಮೃತಪಟ್ಟಿದ್ದಾರೆ.
ಯಡವಾಲ ಗ್ರಾಮದ ಗೌತಮ್ ನಾಯ್ಕ್ (22) ಹಾಗೂ ಶಿವಮೊಗ್ಗ ಕುಂಬಾರಗುಂಡಿಯ ಚಿರಂಜೀವಿ(22)ಮೃತ ಯುವಕರು.
ಆಯನೂರು ಸಮೀಪದ ಯಡವಾಲ ಗ್ರಾಮದ ಸ್ನೇಹಿತ ಗೌತಮ್ ನಾಯ್ಕನ ಮನೆಗೆ ಶಿವಮೊಗ್ಗದಿಂದ ತೆರಳಿದ್ದ 10 ಯುವಕರು ತೆರಳಿದ್ದು, ಬಳಿಕ ಕೃಷಿ ಹೊಂಡಕ್ಕೆ ಇಳಿದಿದ್ದರು. ಅದರಲ್ಲಿ ಇಬ್ಬರು ದುರಾದೃಷ್ಟವಶಾತ್ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಜನಿಸಿದ್ದ ಸ್ನೇಹಿತನ ಸಹೋದರಿ ಮಗು ನೋಡಲು ಸ್ನೇಹಿತರು ಹೋಗಿದ್ದರು. ಮನೆಗೆ ಭೇಟಿ ನೀಡಿ ಬಳಿಕ ತೋಟದಲ್ಲಿ ಪಾರ್ಟಿ ಮಾಡಿದ್ದರು. ಪಾರ್ಟಿ ಮಧ್ಯದಲ್ಲೇ ಕೃಷಿ ಹೊಂಡದ ಬಳಿ ತೆರಳಿ ಓರ್ವ ಯುವಕ ಕಾಲು ಜಾರಿ ಬಿದ್ದಿದ್ದ. ಆತನ ರಕ್ಷಣೆಗೆ ಧಾವಿಸಿದ್ದ ಇನ್ನೊಬ್ಬ ಯುವಕ ಕೂಡ ನೀರು ಪಾಲಾಗಿದ್ದಾನೆ ಎನ್ನಲಾಗಿದೆ. ಯುವಕರ ಮೃತದೇಹಗಳ ಮೆಗ್ಗಾನ್ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.