

ಬಳ್ಳಾರಿ: ಇವರಿಬ್ಬರ ಹೆಸರೂ ಒಂದೇ.. ಒಬ್ಬ ಆ ಕಡೆಯಿಂದ ಬೈಕ್ನಲ್ಲಿ, ಇನ್ನೊಬ್ಬ ಈ ಕಡೆಯಿಂದ ಬೈಕ್ನಲ್ಲೇ ಬರುತ್ತಿದ್ದ. ಇಬ್ಬರ ಬೈಕ್ ಪರಸ್ಪರ ಡಿಕ್ಕಿಯಾಗಿದೆ. ಅಚ್ಚರಿ ಎಂದರೆ ಅಪಘಾತದ ತೀವ್ರತೆಗೆ ಇಬ್ಬರ ತಲೆಗೂ ಪೆಟ್ಟಾಗಿದೆ. ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಇಬ್ಬರೂ ಅಲ್ಲಿ ಸಾವಿಗೀಡಾಗಿದ್ದಾರೆ. ಇಂಥದ್ದೊಂದು ಭೀಕರ ಅಪಘಾತ ಬಳ್ಳಾರಿ ಜಿಲ್ಲೆಯಲ್ಲಿ ಇಂದು ಸಂಭವಿಸಿದೆ.
ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಉಪ್ಪಾರ ಹೊಸಹಳ್ಳಿ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದೆ. ತೆಕ್ಕಲಕೋಟೆ ಗ್ರಾಮದ ವೀರೇಶ್ (19), ಬಲಕುಂದಿ ಗ್ರಾಮದ ವೀರೇಶ್ (23) ಸಾವಿಗೀಡಾದ ಬೈಕ್ಸವಾರರು.
ಒಬ್ಬ ವೀರೇಶ್ ಬಲಕುಂದಿಯಿಂದ ತೆಕ್ಕಲಕೋಟೆಗೆ ಬೈಕ್ನಲ್ಲಿ ಹೋಗುತ್ತಿದ್ದು, ಇನ್ನೊಬ್ಬ ವೀರೇಶ್ ತೆಕ್ಕಲಕೋಟೆಯಿಂದ ಬೈಕ್ನಲ್ಲಿ ಬರುತ್ತಿರುವಾಗ ಎರಡೂ ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮವಾಗಿ ಇಬ್ಬರ ತಲೆಗೂ ಗಂಭೀರ ಗಾಯವಾಗಿದ್ದು, ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವಿಗೀಡಾಗಿದ್ದಾರೆ. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.